ಮರಾಟಿ ಸಮಾಜ ಸೇವಾ ಸಂಘ ಸುಳ್ಯ ತಾಲೂಕು, ಮರಾಟಿ ಮಹಿಳಾ ವೇದಿಕೆ ಸುಳ್ಯ ತಾಲೂಕು ಇದರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಏಪ್ರಿಲ್ 13 ಮತ್ತು 14ರಂದು ಸುಳ್ಯದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ವಹಿಸಲಿದ್ದಾರೆ.
ಪಂದ್ಯಾಟದ ಉದ್ಘಾಟನೆಯನ್ನು ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ್ ನೆರವೇರಿಸಲಿದ್ದಾರೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಯುವ ವೇದಿಕೆಯ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಲೀಗ್ ಮಾದರಿಯ ಪಂದ್ಯಾಟದಲ್ಲಿ ಸುಮಾರು 10 ತಂಡಗಳು ಭಾಗವಹಿಸಲಿದ್ದು ,ಪ್ರಥಮ ಬಹುಮಾನ ರೂ.40ಸಾವಿರ ಮತ್ತು ದ್ವಿತೀಯ ಬಹುಮಾನ ರೂ. 20 ಸಾವಿರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.