ಕೇಂದ್ರ ಸರಕಾರದಿಂದ ಬೆಲೆ ಏರಿಕೆ – ಬಿಜೆಪಿ ಯಾಕೆ ಮೌನ : ಕಾಂಗ್ರೆಸ್ ಪ್ರಶ್ನೆ
ದೇಶದ ಜನ ಮೋದಿಯನ್ನು ರಿಜೆಕ್ಟ್ ಮಾಡಿದ್ದಾರೆ : ಕಾಂಗ್ರೆಸ್

ಅಗತ್ಯ ವಸ್ತುಗಳ ಬೆಲೆ, ಹಾಗೂ ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಖಾಸಗಿ ಬಸ್ ನಿಲ್ದಾಣದ ಬಳಿ ಏ.12 ರಂದು ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ಸಿನ ನಾಯಕರುಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಗಳ ಮುಖಂಡರುಗಳು ಸಾಥ್ ನೀಡಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಸಾಂಕೇತಿಕವಾಗಿ ರಸ್ತೆ ತಡೆಯನ್ನು ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದರು
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿಎಂ ಶಹೀದ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ ಜನತಾ, ಸುಳ್ಯ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಫೈಝಲ್ ಕಡಬ ಮೊದಲಾದವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಗತ್ಯ ವಸ್ತುಗಳ ಮತ್ತು ಪೆಟ್ರೋಲ್, ಡೀಸೆಲ್,ಚಿನ್ನ, ಗ್ಯಾಸ್, ಈ ಎಲ್ಲಾ ಬೆಲೆಗಳನ್ನು ಹೆಚ್ಚಿಸಿರುವುದು ಬಿಜೆಪಿ ಬೆಂಬಲಿತ ಆಡಳಿತದ ಕೇಂದ್ರ ಸರಕಾರ. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಅಭಿವೃದ್ಧಿಯನ್ನು ಮಾಡುವುದು ಬಿಟ್ಟು ಅಗತ್ಯ ವಸ್ತುಗಳ ಪೆಟ್ರೋಲ್ ಬೆಲೆ ಗ್ಯಾಸ್ ಬೆಲೆಗಳನ್ನು ಹೆಚ್ಚಿಸುವ ಕೆಲಸವನ್ನು ಮಾತ್ರವೇ ಮಾಡುತ್ತಾ ಬಂದಿದೆ. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದರು.
ಆದರೆ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರ ಮಾಡುತ್ತಿರುವ ಜನರ ಮೇಲಿನ ಬೆಲೆ ಏರಿಕೆಯ ಸಮಸ್ಯೆಯನ್ನು ಪರಿಹಾರವಾಗಿ ರಾಜ್ಯದ ಜನತೆಗೆ ಪಂಚ ಗ್ಯಾರೆಂಟಿಗಳನ್ನು ನೀಡಿ ಜನರ ಕಷ್ಟಕ್ಕೆ ಸಹಕಾರಿಯಾಗುತ್ತಿದೆ.
ಕರ್ನಾಟಕದ ಬಿಜೆಪಿ ನಾಯಕರುಗಳು ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಕರ್ನಾಟಕದಲ್ಲಿ ಜನಾಕ್ರೋಶ ಯಾತ್ರೆಯನ್ನು ಮಾಡುವ ಮೂಲಕ ರಾಜ್ಯ ದ ಜನತೆಗೆ ಸುಳ್ಳುಗಳನ್ನು ಹೇಳುತ್ತಾ ಬರುತಿದ್ದಾರೆ. ಕಳೆದ ಚುನಾವಣೆಯಲ್ಲಿ ಜನರು ಮಾತ್ರ ಪ್ರಧಾನಿ ಮೋದಿಯವರನ್ನು ರಿಜೆಕ್ಟ್ ಮಾಡಿರುವುದು ಫಲಿತಾಂಶ ದಿಂದ ಗೊತ್ತಾಗುತ್ತದೆ” ಎಂದು ಹೇಳಿದರು.

ರಾಜ್ಯದ ಜನತೆಗೆ ಸತ್ಯ ಯಾವುದು ಸುಳ್ಳು ಯಾವುದು ಎಂಬುವುದರ ಬಗ್ಗೆ ಜ್ಞಾನ ಇದೆ. ಆದ್ದರಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಹಾಗೂ ಉಪಾಧ್ಯಕ್ಷರುಗಳಾದ ರಂಜಿತ್ ರೈ, ಆಸಿಕ್, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಸತ್ಯ ಕುಮಾರ್ ಅಡಿಂಜ,ಎಸ್ ಸಂಶುದ್ದೀನ್ ಅರಂಬೂರು, ಇಕ್ಬಾಲ್ ಎಲಿಮಲೆ, ಸಿದ್ದೀಕ್ ಕೊಕ್ಕೋ, ಕೆ.ಗೋಕುಲ್ ದಾಸ್, ಡೇವಿಡ್ ಧೀರಾ ಕ್ರಾಸ್ತಾ , ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ,ಭವಾನಿ ಶಂಕರ್ ಕಲ್ಮಡ್ಕ, ರಾಜು ಪಂಡಿತ್, ಧರ್ಮ ಪಾಲ ಕೊಯಿಂಗಾಜೆ, ಜಿ ಕೆ ಹಮೀದ್, ಸುಮತಿ ಶಕ್ತಿ ವೇಲು, ಎಸ್ ಕೆ ಹನೀಫ್, ಧಿನಕರ ಸಣ್ಣಮಲೆ, ವಿಮಲಾ ಪ್ರಸಾದ್,ಎ ಬಿ ಅಬ್ಬಾಸ್ ಅಡ್ಕ , ಮಂಜುನಾಥ ಮಡದತಿಲ, ಭವಾನಿಶಂಕರ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಪರಮೇಶ್ವರ ಕೆಂಬಾರೆ, ಪ್ರವೀಣ ಮರುವಂಜ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಕೆ ಗೋಕುಲ್ ದಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರತಿಭಟನೆಯ ಕೊನೆಯಲ್ಲಿ ಸಾಂಕೇತಿಕವಾಗಿ ಒಂದು ನಿಮಿಷಗಳ ಕಾಲ
ಮುಖ್ಯ ರಸ್ತೆಯಲ್ಲಿ ಗ್ಯಾಸ್ ಸಿಲೆಂಡರನ್ನು ಇಟ್ಟು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.