ಭಾರತೀಯ ಭೂ ಸೇನೆಯ ಯೋಧ ಶ್ರೀಕಮಲ್ ಬೊಳ್ಳೂರು ನಿವೃತ್ತಿ

0

ಭಾರತೀಯ ಭೂಸೇನೆಯ ಮೆಡ್ರಾಸ್ ಇಂಜಿನಿಯರ್ ಗ್ರೂಪ್‌ ( M.E.G) ನಲ್ಲಿ 17 ವರ್ಷ ಸೇವೆ ಸಲ್ಲಿಸಿದ ಚೆಂಬು ಗ್ರಾಮದ ಶ್ರೀಕಮಲ್ ಬೊಳ್ಳೂರು ನಿವೃತ್ತಿ ಹೊಂದಿದ್ದಾರೆ.
ಚೆಂಬು ಗ್ರಾಮದ ಬೊಳ್ಳೂರು ವೆಂಕಪ್ಪ ಮತ್ತು ಪೊನ್ನಕ್ಕಿ ಯವರ ಪುತ್ರರಾದ ಶ್ರೀಕಮಲ್ 2008ರಲ್ಲಿ ಭಾರತೀಯ ಸೇನೆಗೆ ಸೇರಿದರು. ಬೆಂಗಳೂರಿನಲ್ಲಿ ಸೇವೆಗೆ ಸೇರಿದ ಅವರು ಜಮ್ಮು ಕಾಶ್ಮೀರ, ಅಸ್ಸಾಂ, ಪಂಜಾಬ್ ಮೊದಲಾದ ಕಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.


ಇವರ ಪತ್ನಿ ಕವನ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಹೆಚ್‌.ಆರ್‌.ಆಗಿದ್ದಾರೆ. 4 ವರ್ಷದ ಮಗ ದಕ್ಷ್ ಇದ್ದಾರೆ.