2024 -25 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ ಏಪ್ರಿಲ್ 11, 2025 ರಂದು ಶುಭವಿದಾಯ ಕೂಟ ಏರ್ಪಡಿಸಲಾಗಿತ್ತು.
ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ದಾಸ್ ವಹಿಸಿದ್ದರು. ಮುಖ್ಯ ಅತಿಥಿಗಳ ನೆಲೆಯಲ್ಲಿ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪೋಷಕ ಸಮಿತಿಯ ಸದಸ್ಯರಾಗಿರುವ ಸುರೇಶ್, ಶ್ರೀಮತಿ ಮಮತಾಮಣಿ ಹಾಗೂ ಸಿ. ಎ. ಗಿರೀಶ್ಉಪಸ್ಥಿತರಿದ್ದರು.
ಅಧ್ಯಕ್ಷ ರುಕ್ಮಯ್ಯ ದಾಸ್ ಅವರು ಮಾತನಾಡುತ್ತಾ ”ಪ್ರೌಢಹಂತ ಪೂರೈಸಿ ಹೊರ ಹೋಗುತ್ತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಪೋಷಕರು, ಶಿಕ್ಷಕ ವೃಂದ ಹಾಗೂ ಊರಿನ ಜನ ಮೆಚ್ಚುವ ಕೆಲಸವನ್ನು, ಸಾಧನೆಯನ್ನು ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿ, ತಾನು ಕಲಿತ ಶಾಲೆಯನ್ನು ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವು ಅತಿ ಅವಶ್ಯಕ. ನಮ್ಮ ಸಂಸ್ಥೆಯಿಂದ ಹೊರಬಂದ ಪ್ರತಿ ವಿದ್ಯಾರ್ಥಿಯು ಒಳ್ಳೆಯ ಶಿಕ್ಷಣವನ್ನು ಪಡೆದು ಉತ್ತಮ ವೃತ್ತಿಯನ್ನು ಆಯ್ಕೆ ಮಾಡುವಂತಾಗಲೆಂದು ಆಶಿಸಿದರು.
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಮಾತನಾಡಿ, ಕೆಲಸಗಳಲ್ಲಿ ಮೇಲು ಕೀಳೆಂಬ ಭೇದ ಭಾವ ತೋರದೆ, ಯಾವುದೇ ಕ್ಷೇತ್ರ ಆಯ್ದುಕೊಂಡರೂ ಶ್ರದ್ಧೆಯಿಂದ ಕೆಲಸ ಮಾಡಿ ಯಶಸ್ಸನ್ನು ಪಡೆಯಿರಿ ಎಂದು ಶುಭ ಹಾರೈಸಿದರು.
ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಹಾಡು ಹಾಗೂ ನೃತ್ಯಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಮನೋರಂಜನಾ ಆಟಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡು ಸಂತಸ ಪಟ್ಟರು.
ಹಾಗೂ ತಮ್ಮ ಅನಿಸಿಕೆಗಳನ್ನು, ಶಾಲೆಯ ಬಗ್ಗೆ ಇರುವಂತಹ ಗೌರವವನ್ನು ಶಿಕ್ಷಕರಲ್ಲಿ ಇರುವಂತಹ ಬಿಡಿಸಲಾಗದ ಬಾಂಧವ್ಯವನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಜಾನ್ವಿ ಬಿ ರೈ ನಿರೂಪಿಸಿ ವಂದಿಸಿದರು. ತಿಶಾ ಖತೀಜಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕವೃಂದ, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.