
ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೨೧ನೇ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯಿತು.

ನಿನ್ನೆ ಸಂಜೆ ಭಜನಾ -ನಾಮ ಸಂಕೀರ್ತನೆ, ಸಂಜೆ ದೀಪಾರಾಧನೆ, ರಾತ್ರಿ ಶ್ರೀ ದುರ್ಗಾನಮಸ್ಕಾರ ಪೂಜೆ, ಮಹಾಮಂಗಳರಾತಿ, ನಂತರ ಅನ್ನಪ್ರಸಾದ ನಡೆಯಿತು.
ಇಂದು ಬೆಳಿಗ್ಗೆ ಗಣಪತಿ ಹವನ, ಗುರುಪೂಜೆ, ನವಕಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಭಕ್ತಾದಿಗಳು ಉಪಸ್ಥಿತರಿದ್ದು, ದೇವರ ಪ್ರಸಾದ ಸ್ವೀಕರಿಸಿದರು.
