ಕೊಯಿಕುಳಿ ಕುಟುಂಬದ ಕಾಲಾವಧಿ ನೇಮ ನಡಾವಳಿಗೆ ದೈವ ನರ್ತಕರಾಗಿ ಆಗಮಿಸಿದ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ, ಪ್ರಖ್ಯಾತ ದೈವ ನರ್ತಕ ಕೋಟಿ ಪರವ ಮಾಡಾವುರವರನ್ನು ಕೆ.ಟಿ.ವಿಶ್ವನಾಥರ ನೂತನ ಮನೆಯಲ್ಲಿ ಸನ್ಮಾನಿಸಲಾಯಿತು. ಅವರಿಗೆ ಕೆ.ಟಿ.ವಿಶ್ವನಾಥರು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಕೋಟಿ ಪರವ ರವರಿಗೆ ಗೌರವ ಪ್ರಶಸ್ತಿ ಬಂದಿತ್ತು.

ಈ ಸಂದರ್ಭದಲ್ಲಿ ಕೋಟಿ ಪರವರವರ ಮಗ ತಿಮ್ಮಪ್ಪ ಪರವ, ಹಾಗೂ ಪ್ರಶಾಂತಿ ವಿಶ್ವನಾಥ, ಸಹೋದರ ಕೆ.ಟಿ.ಭಾಗೀಶ್, ಪುತ್ರ ಗಗನ್ ಕೆ.ವಿ., ಮಗಳು ಬೇಬಿ ಹಿಮ ಕೆ.ವಿ.ಮತ್ತು ಲತೀಶ್, ಇನ್ನಿತರರು ಉಪಸ್ಥಿತರಿದ್ದರು.