ಮಯೂರಿ ಯುವತಿ ಮಂಡಲ,ಚೊಕ್ಕಾಡಿ ಗರುಡ ಯುವಕ ಮಂಡಲ ಚೊಕ್ಕಾಡಿ ಹಾಗೂ ಸಮರ್ಪಣಾ ಜಾರಿ ಟೇಬಲ್ ಟ್ರಸ್ಟ್ ಚೊಕ್ಕಾಡಿ ಇದರ ವತಿಯಿಂದ ಐದು ದಿನಗಳ ಕಾಲ ನಡೆಯುವ ಉಚಿತ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆಯನ್ನು ಎ.10ರಂದು ಹಿರಿಯರಾದ ಆನೆಕಾರ್ ಗಣಪಯ್ಯ ಭಟ್ ಇವರು ನೆರವೇರಿಸಿದರು .

ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷರಾದ ಮಹೇಶ್ ಭಟ್ ಚೂಂತಾರು ಹಾಗೂ ಜನಜಾಗೃತಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಗೌಡ ಬೊಳ್ಳೂರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕುಣಿತ ಭಜನೆ ಸೇರಿದಂತೆ ಹಲವಾರು ತರಬೇತಿಗಳು ನಡೆಯಲಿವೆ. ಶಿಬಿರದಲ್ಲಿ ಅದಿಕ ಸಂಖ್ಯೆಯಲ್ಲಿ ಮಕ್ಕಳು ನೋಂದಾವಣೆಗೊಂಡಿರುತ್ತಾರೆ.
ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಪಾರ್ವತಿ ನೇಣಾರು ಯುವತಿ ಮಂಡಲದ ಅಧ್ಯಕ್ಷರಾದ ಹೇಮಾವತಿ ತಂಟೆಪ್ಪಾಡಿ ಯುವಕ ಮಂಡಲದ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು.