ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ -2025 ವಾಲಿಬಾಲ್ ವಿಭಾಗದಲ್ಲಿ ರಾಷ್ಟ್ರೀಯ ಪಂದ್ಯಾಟಕ್ಕೆ ಶಿವಕುಮಾರ್ ಎಸ್ .ಕೂಟೇಲ್ (ಮಂಗಳೂರು) ಇವರನ್ನು ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರೀಯ ತೀರ್ಪುಗಾರರನ್ನಾಗಿ ಕರ್ನಾಟಕ ರಾಜ್ಯದ ಪರವಾಗಿ ಆಯ್ಕೆಮಾಡಿದೆ.
2025 ಮೇ 4ರಿಂದ 8 ರವರೆಗೆ ನಡೆಯವ ಖೇಲೋ ಇಂಡಿಯಾ ಯೂತ್ ವಾಲಿಬಾಲ್ ಗೇಮ್ಸ್ ನಡೆಯಲಿದ್ದು,
ಶಿವಕುಮಾರ್ ರವರು ತೀರ್ಪುಗಾರರಾಗಿ 2 ನೇ ಬಾರಿಗೆ ಕರ್ನಾಟಕ ರಾಜ್ಯದ ಪರವಾಗಿ
ಪ್ರತಿನಿಧಿಸುತ್ತಿದ್ದಾರೆ.ಇವರು ಅನೇಕ ರಾಜ್ಯ ಮತ್ತು ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಉತ್ತಮ ನಿರ್ಣಾಯಕರಾಗಿ ಹಲವಾರು ಪಂದ್ಯಾಟವನ್ನು ಮುನ್ನಡೆಸಿರುತ್ತಾರೆ