ಮಕ್ಕಳಲ್ಲಿ ಸಂಸ್ಕೃತಿ, ಸಾಹಿತ್ಯದ ಅಭಿರುಚಿಗಳು ಬೆಳೆಯಲಿ : ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ

ಸುಳ್ಯದ ರಂಗಮಯೂರಿ ಕಲಾ ಶಾಲೆಯ ವತಿಯಿಂದ ರಾಜ್ಯ ಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರಕ್ಕೆ ಕಾಯರ್ತೋಡಿ ಮಹಾವಿಷ್ಣು ಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಎ. ೧೨ರಂದು ಚಾಲನೆ ದೊರೆತಿದೆ.

ಸುಳ್ಯದ ಶ್ರೀಹರಿ ಬಿಲ್ಡಿಂಗ್ ಮಾಲಕ ಹಾಗೂ ಉದ್ಯಮಿ ಕೃಷ್ಣ ಕಾಮತ್ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಮಕ್ಕಳಿಗೆ ಪುಸ್ತಕದ ಅಭ್ಯಾಸವಾದರಷ್ಟೆ ಸಾಲದು, ಸಂಸ್ಕೃತಿ, ಸಾಹಿತ್ಯದ ಅಭಿರುಚಿಗಳು ಬೆಳೆಯಬೇಕು, ಇಂದು ನಗರ ಭಾಗಗಳಿಂದಲೂ ಗ್ರಾಮಾಂತರ ಪ್ರದೇಶ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ವಹಿಸುತ್ತಿರುವುದು ಹೆಮ್ಮೆಯ ವಿಷಯ” ಎಂದರು.

ವೇದಿಕೆಯಲ್ಲಿ ನೆಹರೂ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್, ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಠಲ್, ಜತ್ತಪ್ಪ ರೈ, ಬ್ಯಾಂಕ್ ಆಪ್ ಬರೋಡದ ಸುಳ್ಯ ಶಾಖಾ ವ್ಯವಸ್ಥಾಪಕ ವಿಜಯ್, ರಂಗ ಕಲಾವಿದೆ ಪಲ್ಲವಿ ಕೊಡಗು, ರಂಗ ಮಯೂರಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಂಗ ಮಯೂರಿ ಕಲಾ ಶಾಲೆಯ ಹಿರಿಯ ವಿದ್ಯಾರ್ಥಿನಿ ದೃತಿ ದೀಟಿಕೆ ಸ್ವಾಗತಿಸಿ, ರಂಗ ಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು. ಆರ್ಯ ಮತ್ತು ಸಾಥಿ ಪ್ರಾರ್ಥಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
