
ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಮಾ.28 ರಂದಿ ಭೇಟಿ ನೀಡಿದರು.
ಕುಟುಂಬಸ್ಥರೊಂದಿಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿ, ಬರಮಾಡಿಕೊಂಡರು. ಬಸವರಾಜ ಹೊರಟ್ಟಿ ಅವರು ಶ ಕ್ಷೇತ್ರದ ವಸತಿಗೃಹದಲ್ಲಿ ವಾಸ್ತವ್ಯ ಮಾಡಿದ್ದ. ಮಾ.29 ರಂದು ಕ್ಷೇತ್ರದಲ್ಲಿ ಮೊದಲ ದಿನದ ಸರ್ಪಸಂಸ್ಕಾರ ಸೇವೆ ನೆರವೇರಿಸುವರು. ಮಾ.30ರಂದು ಎರಡನೇ ದಿನದ ಸರ್ಪಸಂಸ್ಕಾರ ಸೇವೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವರು. ಹಾಗೂ ಕುಕ್ಕೆಯಿಂದ ನಿರ್ಗಮಿಸುವರು ಎಂದು ತಿಳಿದುಬಂದಿದೆ.




ಸಭಾಪತಿ ರಥಬೀದಿ ಸುತ್ತಾಟ ಗೋವು ವೀಕ್ಷಣೆ
ಕ್ಷೇತ್ರದಲ್ಲಿ ಸಂಜೆ ವೇಳೆ ಬಸವರಾಜ ಹೊರಟ್ಟಿ ಅವರು ರಥಬೀದಿ ಪರಿಸರದಲ್ಲಿ ಸುತ್ತಾಟ ನಡೆಸಿದರು. ರಥಬೀದಿರ ರಸ್ತೆ ಬದಿಗಳಲ್ಲಿ ಸಾಮಾನ್ಯರಂತೆ ಕುಳಿತು ಪರಿಸರದ ಸೌಂದರ್ಯ ವೀಕ್ಷಿಸಿದರು. ದೇವಸ್ಥಾನದ ಗೋಶಾಲೆಗೆ ತೆರಳಿ ಗೋವುಗಳ ಮೈ ಮುಟ್ಟಿ ಗೋವುಗಳ ಬಗ್ಗೆ ವಿಚಾರಿಸಿದರು.