ಮುರುಳ್ಯ ಶಾಂತಿನಗರ ಶಾಲೆಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ರೂ. 5 ಲಕ್ಷ ಅನುದಾನ

0

ಮುರುಳ್ಯ ಶಾಂತಿನಗರ ಸ ಹಿ.ಪ್ರಾ ಶಾಲೆಗೆ ಶಾಸಕರ ಅನುದಾನದಿಂದ ವಿವಿಧ ಕಾಮಗಾರಿಗಳಿಗೆ ರೂ. 5 ಲಕ್ಷವನ್ನು ಮಂಜೂರು ಮಾಡಿದ್ದು, ಕಾಮಗಾರಿಗೆ ಗುದ್ದಲಿ ಪೂಜೆ ಮಾ. 31ರಂದು ನೆರವೇರಿತು.

ಪ್ರಾರಂಭಿಕ ಹಂತವಾಗಿ ಶಾಲೆಯ ಮುಖ್ಯ ಪ್ರವೇಶ ದ್ವಾರ ಬದಲಾವಣೆ ಹಾಗೂ ಮುಖ್ಯ ರಸ್ತೆಯಿಂದ ಶಾಲಾ ಕ್ರಿಡಾಂಗಣದವರೆಗೆ ಕಾಂಕ್ರಿಟೀಕರಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಾ. 31ರಂದು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.

ಸರಕಾರಿ ಶಾಲೆಯ ಅಭಿವೃದ್ಧಿ ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ LKG/ UKG ತರಗತಿಗಳ ಪ್ರಾರಂಭ ಹಾಗೂ ಕಾಮಗಾರಿಯ ಕೆಲಸ ಆದಷ್ಟು ಬೇಗನೆ ಪ್ರಾರಂಭಿಸಿ ಉದ್ಘಾಟಿಸಿ ಲೋಕಾರ್ಪಣೆ ಮಾಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ ಸದಸ್ಯರಾದ ಶೀಲಾವತಿ ಗೊಳ್ತಿಲ, ಮೋನಪ್ಪ ಅಲೇಕಿ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ವಸಂತ ನಡುಬೈಲು ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ ನಡುಬೈಲು, ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ, ಶಿಕ್ಷಕಿ ಶಾಲಿನಿ ಸುಭಾಸ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದಶಿ೯ ರೋಹಿತ್ ಹೆದ್ದಾರಿ, ಅನೂಪ್ ಬಿಳಿಮಲೆ, ಪುಟ್ಟಣ್ಣ ಅಲೆಕ್ಕಾಡಿ, ಸಿ.ಆರ್.ಪಿ ಜಯಂತ ಕಳತ್ತಜೆ, ಗುತ್ತಿಗೆದಾರ ನವೀನ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಶಾಲಾಭಿಮಾನಿಗಳು,ಊರ ಗಣ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ ಸ್ವಾಗತಿಸಿ, ವಂದಿಸಿದರು.