ಅಮರ ಸಂಘಟನಾ ಸಮಿತಿ ಸುಳ್ಯ
ಇದರ ಆಶ್ರಯದಲ್ಲಿ
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ
ಸಹಕಾರದೊಂದಿಗೆ
ಅಂಚೆ ಜನ ಸಂಪರ್ಕ ಅಭಿಯಾನ,
ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ
ಅಪಘಾತ ವಿಮೆ ನೊಂದಣಿ ಶಿಬಿರ ಮಾ. 16 ರಂದು ಕುಕ್ಕುಜಡ್ಕ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಎಂ ಬಿ ಪಾರೆ, ಇಎಸ್ಐ ಆಸ್ಪತ್ರೆ ಸುಳ್ಯ ನೆರವೆರಿಸಿದರು. ಮುಖ್ಯ ಅತಿಥಿಗಳಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರ್ಕೆಟ್ ಮುಖ್ಯಾಧಿಕಾರಿ ಗುರುಪ್ರಸಾದ್ ಕೆ.ಎಸ್, ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಅರುಣ್ ನಾಯರ್ ಕಲ್ಲು, ಧರ್ಮಸಾಸ್ತ ಭಜನಾ ಮಂಡಳಿ ಪಿಲಿಕಜೆ ಇದರ ಕಾರ್ಯಾಧ್ಯಕ್ಷರಾದ ಗಣೇಶ್ ಪಿಲಿಕಜೆ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಿರ್ತನ್ ಪಾರೆ ಸ್ವಾಗತಿಸಿ ಜಯಪ್ರಸಾದ್ ಸಂಕೇಶ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಸದಸ್ಯರಾದ ಪ್ರವೀಣ್ ಕುಲಾಲ್, ಹರ್ಷೀತ್ ದಾತಡ್ಕ, ಸುಧೀರ್ ದೇವ, ಪ್ರಸಾದ್ ಬೊಳ್ಳೂರು, ಮಿಥುನ್ ಪೈಲಾರು, ಶಿವಪ್ರಸಾದ್ ದೊಡ್ಡಿಹಿತ್ಲು, ಹಿತೇಶ್ ನಾರ್ಕೊಡು, ರಾಜಿವಿ ಗೊಳ್ಯಾಡಿ, ಮನೀಶ್ ಕಡಪಳ, ಕೃತಿಕಾ ಪೈಲಾರು, ಹಸ್ತ ಕಡಪಳ, ರಚೀತಾ ಮಾಡಬಾಕಿಲು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
