ಗೃಹ ನಿರ್ಮಾಣಕ್ಕೆ ಸಹಾಯ ಹಸ್ತ ಕೋರಿ ಸೀತಮ್ಮ ಹೊನ್ನೆಕಡ್ಪುರವರಿಂದ ಅಮರ ಸಂಘಟನಾ ಸಮಿತಿಗೆ ಮನವಿ

0

ವಾಸವಾಗಿರುವ ಮನೆ ಶಿಥಿಲಗೊಂಡು ಜರಿದು ಬೀಳುವ ಹಂತದಲ್ಲಿದ್ದು, ನೂತನ ಗೃಹ ನಿರ್ಮಾಣ ಮಾಡಲು ಸಹಾಯ ಮಾಡುವಂತೆ ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ಸೀತಮ್ಮರವರು ಅಮರ ಸಂಘಟನಾ ಸಮಿತಿ ಪದಾಧಿಕಾರಿಗಳಿಗೆ ಮನವಿ ನೀಡಿದರು.
ಅಮರ ಸಂಘಟನಾ ಸಮಿತಿಯ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು, ಅಧ್ಯಕ್ಷ ಪ್ರವೀಣ್ ಕುಲಾಲ್, ಪದಾಧಿಕಾರಿಗಳಾದ ಕೀರ್ತನ್ ಪೈಲಾರು, ಸುಧೀರ್ ದೇವ,
ಪ್ರಸಾದ್ ಬೊಳ್ಳೂರು,
ಮಿಥುನ್ ಪೈಲಾರು ಮನವಿಯನ್ನು ಸ್ವೀಕರಿಸಿದರು. ಅಮರಪಡ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ, ಸದಸ್ಯ ಅಶೋಕ್ ಚೂಂತಾರು, ಸೀತಮ್ಮರ ಪುತ್ರಿ ಕು. ಹರಿಣಿ, ಸುದ್ದಿ ವರದಿಗಾರ ಈಶ್ವರ ವಾರಣಾಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.