ಎಡಮಂಗಲ ಮರ್ದೂರಡ್ಕ ಎಂಬಲ್ಲಿ ಸ್ಥಳೀಯರಾದ ವಿಶ್ವನಾಥ ಎಂಬವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ವರದಿಯಾಗಿದೆ.
ವಿಶ್ವನಾಥರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮೊಬೈಲ್ ಒತ್ತುತ್ತಿದ್ದರೆಂದೂ, ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಗುದ್ದಿಕೊಂಡು ಹೋದುದರಿಂದ ವಿಶ್ವನಾಥರು ಮೃತರಾದರೆಂದೂ ಹೇಳಲಾಗಿದೆ.