ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ. 17 ಮತ್ತು 18 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ನಡೆಯಲಿರುವುದು.

ಮಾ. 17 ರಂದು ಅಪರಾಹ್ನ ಗಂಟೆ 2.00 ರಿಂದ ಶ್ರೀ ಕಾರ್ನವನ್ ದೈವದ ವೆಳ್ಳಾಟಂ, ಸಂಜೆ 4.00 ರಿಂದ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ,
ರಾತ್ರಿ ಗಂಟೆ 7 ರಿಂದ
ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್
ರಾತ್ರಿ ಗಂಟೆ 11 ರಿಂದ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡುವುದು.ಬಳಿಕ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.
ಮಾ. 18 ರಂದು ಪೂರ್ವಾಹ್ನ ಗಂಟೆ 9.00 ರಿಂದ ಶ್ರೀ ಕಾರ್ನವನ್ ದೈವ, ಶ್ರೀ ಕೋರಚ್ಚನ್ ದೈವ, ಮಧ್ಯಾಹ್ನ ಗಂಟೆ 1.00 ರಿಂದ ಶ್ರೀ ಕಂಡನಾರ್ ಕೇಳನ್ ದೈವ ನಡೆಯಲಿರುವುದು.
ಸಂಜೆ ಗಂಟೆ 4.00 ರಿಂದ ಶ್ರೀ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆಯಾಗಲಿರುವುದು.ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕೋಲವು ನಡೆಯಲಿರುವುದು. ರಾತ್ರಿ ಗಂಟೆ 1.00 ರಿಂದ ಮರ ಪಿಳರ್ಕಲ್ ನಂತರ ಕೈವೀದ್ ನಡೆಯಲಿರುವುದು. ದೈವಂಕಟ್ಟು ಮಹೋತ್ಸವದ ಸಂದರ್ಭದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ನಿರಂತರವಾಗಿ ಅನ್ನ ಸಂತರ್ಪಣೆಯು ನಡೆಯಲಿದೆ.
ಇತಿಹಾಸ
ಮರುಕಳಿಸಲಿರುವ
ದೈವಂಕಟ್ಟು ಮಹೋತ್ಸವದ ವೀಕ್ಷಣೆಗೆ ಸುಮಾರು 80 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಕೇರಳ ರಾಜ್ಯದಿಂದ ಮತ್ತು ಕೊಡಗು ಜಿಲ್ಲೆಯ ಭಾಗದಿಂದ ದೈವಂಕಟ್ಟು ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದ್ದು ವಾಹನ ಪಾರ್ಕಿಂಗ್ ಮಾಡಲು ಅರಂಬೂರು ಶಾಲಾ ಮೈದಾನದಲ್ಲಿ ಮತ್ತು ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.