Home Uncategorized ಸುಳ್ಯ ಬೂಡು ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ...

ಸುಳ್ಯ ಬೂಡು ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭೆ ಸಮಾರೋಪ

0

ದೈವಾರಾಧನೆಯ ಪಾಡ್ದನಗಳಿಂದ ತುಳು ಸಂಸ್ಕೃತಿ,ಪರಂಪರೆಯ ಉಳಿವು : ನಳಿನ್ ಕುಮಾರ್ ಕಟೀಲ್

“ತುಳುನಾಡಿನ ಮೂಲ ನಂಬಿಕೆಯೆ ದೈವಾರಾಧನೆ. ತುಳುನಾಡು ವಿಶಿಷ್ಟ ಪರಂಪರೆ ಇರುವ ನಾಡು.ಇಲ್ಲಿ ಹಿರಿಯರು ನಂಬಿಕೊಂಡು ಬಂದಿರುವಂತಹ ದೈವಾರಾಧನೆ ಸಾಮರಸ್ಯದ ಸಂಕೇತವಾಗಿದೆ.ದೇವಾರಾಧನೆ,ದೈವಾರಾಧನೆ,ನಾಗಾರಾಧನೆ ಇಲ್ಲಿನ ವಿಶೇಷತೆ. ಎಲ್ಲಾ ಸಮಾಜದವರು ಸೇರಿ ಇಲ್ಲಿ ಬ್ರಹ್ಮಕಲಶವನ್ನು ಯಶಸ್ವಿಯಾಗಿ ಮಾಡಿದ್ದಾರೆ.ದೈವಾರಾಧನೆಯಿಂದ ಎಲ್ಲರನ್ನು ಒಗ್ಗೂಡಿಸಲು ಸಾಧ್ಯ.ದೈವಾರಾಧನೆಯ ಪಾಡ್ದನಗಳಿಂದ ತುಳು ಸಂಸ್ಕೃತಿ,ಆಚಾರ,ವಿಚಾರ,ಪರಂಪರೆಗಳು ಉಳಿದಿದೆ” ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಮಾ.15 ರಂದು ಸುಳ್ಯ ಬೂಡು ಪರಿಸರದ ಸತ್ಯಪದಿನಾಜಿ,ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ.ಸಮೂಹ ವಿದ್ಯಾಸಂಸ್ಥೆಗಳ ಕಮಿಟಿ ಬಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲ್, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,
ನ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಉದ್ಯಮಿ ಹೇಮಂತ್ ಕಾಮತ್, ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್‌, ಅಧ್ಯಕ್ಷ ನಾರಾಯಣ ಕೇಕಡ್ಕ, ನ.ಪಂ. ಮಾಜಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಹಾಗೂ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯ ಲಿಂಗಪ್ಪ ಗೌಡ ಕೇರ್ಪಳ, ಉಳ್ಳಾಕುಲು ಹಾಗೂ ಮಿತ್ತೂರು ದೈವದ ಹಿರಿಯ ಪೂಜಾರಿ ಮಿತ್ತೂರು ರವಿರಾಮ ರೈ, ಕುಕ್ಕನ್ನೂರು ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ರೈ, ನಿವೃತ್ತ ಶಿಕ್ಷಕಿ ಮೀನಾಕ್ಷಿ ಆನಂದ ಗೌಡ, ಊರಿನ ಹಿರಿಯರಾದ ಮಾಧವ ಬೂಡು, ಕುಂಞ ಮೇಸ್ತ್ರಿ, ಸಿಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶೀನಪ್ಪ ಬಯಂಬು, ಆದಿ ದ್ರಾವಿಡ ಯುವ ವೇದಿಕೆ ಅಧ್ಯಕ್ಷ ಮೋನಪ್ಪ ಮಡಿವಾಳಮೂಲೆ, ಅಂಗನವಾಡಿ ಕಾರ್ಯಕರ್ತೆ ಕವಿತಾ ಬೂಡು, ದೈವಸ್ಥಾನದ ಆಡಳಿತ ಮೊಕ್ತೇಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು ಮತ್ತಿತರರು ಉಪಸ್ಥಿತರಿದ್ದರು.


ಸನ್ಮಾನ


ಬ್ರಹ್ಮಕಲಶೋತ್ಸವಕ್ಕೆ ನೇತೃತ್ವ ವಹಿಸಿದ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಮೀನಾಕ್ಷಿ ಆನಂದ ಗೌಡ, ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್ಸ್‌ ಅವರನ್ನು ಶಾಲು ಹಿದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರಿಯಾಂಕ, ರೇಷ್ಮಾ, ದೀಕ್ಷಿತಾ ಪ್ರಾರ್ಥಿಸಿದರು. ಕವಿತಾ ಬೂಡು ಸ್ವಾಗತಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳು


ಸಭಾಕಾರ್ಯಕ್ರಮ ನಡೆದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯನ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಸಂಗೀತ ರಸಮಂಜರಿ. ಬಳಿಕ ಎಕ್ಸ್ ಟೆಸಿ ಡ್ಯಾನ್ಸ್ ಕ್ರಿವ್ ಸುಳ್ಯ ಇವರಿಂದ ಡಾನ್ಸ್ ಧಮಾಕ ನಡೆಯಿತು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಮಾ.18ರಂದು ಮಂಗಳವಾರ ದೈವಗಳ ನೇಮೋತ್ಸವ ನಡೆಯುವುದು.

NO COMMENTS

error: Content is protected !!
Breaking