ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.,08,09,10 ರಂದು ಜಾತ್ರೋತ್ಸವ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.14 ರಂದು ದೇವಸ್ಥಾನದಲ್ಲಿ ನಡೆಯಿತು. ಹಿರಿಯರಾದ ಮಡ್ತಿಲ ಬೆಳ್ಯಪ್ಪ ಗೌಡರವರು ಆಮಂತ್ರಣ ಬಿಡುಗಡೆ ಮಾಡಿ ಶುಭಹಾರೈಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಪಿ.ಜಿ. ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ಸದಸ್ಯರಾದ ಬಾಲಕೃಷ್ಣ ಮಡ್ತಿಲ,ರಾಧಾಕೃಷ್ಣ ಚಾಕೋಟೆ,ಕರುಣಾಕರ ನಾಯ್ಕ ಉದ್ದಂಪಾಡಿ,ಶ್ರೀಮತಿ ಆಶಾ ಮಡ್ತಿಲ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ,ಮುರಳೀಧರ ಕೊಚ್ಚಿ, ಅರ್ಚಕ ವಶಿಷ್ಟ ಭಟ್ ಚೂಂತಾರು, ಪಿ.ಡಿ.ಒ ಶ್ಯಾಮ್ ಪ್ರಸಾದ್ ,ಗೋಪಾಲಕೃಷ್ಣ ಶಾಸ್ತ್ರಿ, ವ್ಯ.ಸ.ಮಾಜಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಮಾಜಿ ಸದಸ್ಯ ದೇವಿದಾಸ ಕತ್ಲಡ್ಕ ,ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಚೆಮ್ನೂರು, ಬೆಳ್ಯಪ್ಪ ಗೌಡ ದೇರಾಜೆ,ಲಕ್ಷ್ಮಣ ಗೌಡ ದೇರಾಜೆ,ರಾಮಚಂದ್ರ ಗೌಡ ಪಲ್ಲತ್ತಡ್ಕ, ಬೆಳ್ಯಪ್ಪ ಗೌಡ ಮಡ್ತಿಲ,ಹರಿಶ್ಚಂದ್ರ ಕೊಪ್ಪತ್ತಡ್ಕ,ಧನಂಜಯ ಮಡ್ತಿಲ, ಕಚೇರಿ ನಿರ್ವಾಹಕ ಯಶವಂತ ಬಾರೆತ್ತಡ್ಕ,ಅಜಿತ್ ದೇರಾಜೆ, ಪೂಗವನ ನಿರ್ವಾಹಕ ಪೊನ್ನಪ್ಪ ಪಡ್ಡಂಬೈಲು,ರವಿನಾಥ ಮಡ್ತಿಲ, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.