ಸುಳ್ಯ ನಗರದ ಗುರುಂಪು ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ನೀರಿಲ್ಲ. ಮೂಲಭೂತ ವ್ಯವಸ್ಥೆಯನ್ನೇ ನಗರಾಡಳಿತ ಕಲ್ಪಿಸದಿದ್ದರೆ ಹೇಗೆ ಎಂದು ಗುರುಂಪು ನಿವಾಸಿ ಶರೀಓ್ ಎಂಬವರು ಬೇಸರ ತೋಡಿಕೊಂಡಿದ್ದಾರೆ.
ಸುದ್ದಿ ಕಚೇರಿಗೆ ಕರೆ ಮಾಡಿದ ಶರೀಫ್ ರವರು ಮೂರು ದಿನಗಳಿಂದ ನೀರೇ ಬರುತ್ತಿಲ್ಲ. ವಾರ್ಡ್ ಸದಸ್ಯರಿಗೆ ಕರೆ ಮಾಡಿದರೆ ಯಾರೋ ರಿಸೀವ್ ಮಾಡಿ ಅವರು ಬ್ಯುಝಿ ಇದ್ದಾರೆ ಎಂಬ ಉತ್ತರ ಬರುತ್ತದೆ. ಜನರ ಸಮಸ್ಯೆಗೆ ಸ್ಪಂದಿಸದವರು ಚುನಾವಣೆಗೆ ಯಾಕೆ ನಿಲ್ಲುವುದು. ಆದ್ದರಿಂದ ನಮಗೆ ನೀರಿನ ವ್ಯವಸ್ಥೆ ನಗರಾಡಳಿ ಕಲ್ಪಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.