ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ; ಸಾಯಿನಾಥ ನಾವುಡರಿಗೆ ಗಾಯ

0

ಬಾಳಿಲದಲ್ಲಿ ಸೌಂಡ್ಸ್ ಮತ್ತು ಲೈಟಿಂಗ್ಸ್ ಸಂಸ್ಥೆಯನ್ನು ನಡೆಸುತ್ತಿರುವ ಸಾಯಿನಾಥ ನಾವುಡರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಘಟನೆ ನಡೆದಿದ್ದು , ಗಾಯಗೊಂಡ ನಾವುಡರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ಪೆರ್ಲಂಪಾಡಿ ಬಳಿ ಈ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ.