ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲ(ರಿ )ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಇತ್ತೀಚೆಗೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ನಳಿನಾಕ್ಷಿ ಪ್ರಸಾದ್ ಅಡ್ಪಂಗಾಯ, ಅಧ್ಯಕ್ಷರಾಗಿ ಕವಿತಾ ಪುರುಷೋತ್ತಮ, ಉಪಾಧ್ಯಕ್ಷರಾಗಿ ವಿಮಲಾ ಅರುಣ ಪಡಂಬೈಲು, ಕಾರ್ಯದರ್ಶಿಯಾಗಿ ಜಯಶ್ರೀ ನಾಗೇಶ್ ಬೇಲ್ಯ, ಜೊತೆ ಕಾರ್ಯದರ್ಶಿಯಾಗಿ ಚಿನ್ನಮ್ಮ ಮಾಧವ ಬಯಂಬು, ಕೋಶಾಧಿಕಾರಿಯಾಗಿ ಹರಿಣಾಕ್ಷಿ ಉದಯ ಮೇನಾಲ, ನಿರ್ದೇಶಕರಾಗಿ ವನಿತ ಸುಬ್ರಹ್ಮಣ್ಯ ಕರ್ಲಪ್ಪಾಡಿ, ವಸಂತಿ ಶಿವರಾಮ ಶಾಂತಿ ಮಜಲು, ಭಾಗೀರಥಿ ಗೋಪಾಲಕೃಷ್ಣ ಅಡ್ಡನ್ತಡ್ಕ ಆಯ್ಕೆಯಾದರು.
ಮಹಾಸಭೆಯಲ್ಲಿ ಮಹಿಷಮರ್ದಿನೀ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು, ಸಲಹಾ ಸಮಿತಿ ಸದಸ್ಯರಾದ ಬೆಳ್ಯಪ್ಪ ಗೌಡ ಮುಡೂರು, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ವೇದಾವತಿ ಬಾಲಚಂದ್ರ ಅಡ್ಪಂಗಾಯ, ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷರಾದ ಜಯಂತಿ ಜನಾರ್ಧನ ಅಜ್ಜಾವರ ಉಪಸ್ಥಿತರಿದ್ದರು.
ವರದಿಯನ್ನು ವಿಶಾಲ ಸೀತಾರಾಮ ಕರ್ಲ ಪ್ಪಾಡಿ, ಲೆಕ್ಕ ಪತ್ರ ಮಂಡನೆ ವೇದಾವತಿ ಬಾಲಚಂದ್ರ, ಪ್ರಾರ್ಥನೆಯನ್ನು ಯಶವಂತಿ, ಸ್ವಾಗತ ಕವಿತಾ ಪುರುಷೋತ್ತಮ, ಧನ್ಯವಾದ ಮತ್ತು ನಿರೂಪಣೆ ಜಯಶ್ರೀ ನಾಗೇಶ್ ನೆರವೇರಿಸಿದರು.