ಈ ವರ್ಷದ ಮೊದಲ ಗಾಳಿ ಮಳೆ

0

ಮರ್ಕಂಜದ ದಾಸರಬೈಲಿನಲ್ಲಿ ಧರೆಗುರುಳಿದ ಮರ

ವಿದ್ಯುತ್ ಕಂಬ ಮತ್ತು ಶಾಲಾ ಕಂಪೌಂಡ್ ಗೆ ಹಾನಿ

ಇಂದು ಸಂಜೆ ಸುರಿದ ಈ ವರ್ಷದ ಮೊದಲ ಗಾಳಿ ಮಳೆಗೆ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಮತ್ತು ಶಾಲಾ ಕಾಂಪೌಂಡ್ ಗೆ ಹಾನಿಯಾದ ಘಟನೆ ವರದಿಯಾಗಿದೆ.

ಸಂಜೆಯ ವೇಳೆಗೆ ಬೀಸಿದ ಗಾಳಿ ಮತ್ತು ಬಿರುಸಾಗಿ ಸುರಿದ ಮಳೆಗೆ ಮರ ಧರೆಗುರುಳಿದೆ. ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಹಾಗೂ ಶಾಲಾ ಕಾಂಪೌಂಡ್ ಗೂ ಹಾನಿಯಾಗಿದೆ.

ರಸ್ತೆಗೆ ಅಡ್ಡಾವಾಗಿ ಬಿದ್ದ ಮರವನ್ನು ಸ್ಥಳೀಯರು ತೆರವು ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ