ಜಾಲ್ಸೂರು ಗ್ರಾಮದ ಅಡ್ಕಾರು ಅಯ್ಯಪ್ಪ ಮಂದಿರದ ಗೌರವಾಧ್ಯಕ್ಷರಾಗಿರುವ ನಾರಾಯಣ ಮಡಿವಾಳರು ಇಂದು ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮಾ. 24 ರಂದು ಸಂಜೆ ಮನೆಯಲ್ಲಿದ್ದ ಸಂದರ್ಭ ಲೋ ಬಿಪಿ ಗೆ ಒಳಗಾಗಿದ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾದರೆಂದು ತಿಳಿದುಬಂದಿದೆ.
ಅಡ್ಕಾರಿನಲ್ಲಿ ಅಯ್ಯಪ್ಪ ಮಂದಿರ ಆರಂಭಕ್ಕೆ ಶ್ರಮ ವಹಿಸಿದ್ದ ಇವರು ಅದರ ಗೌರವಾಧ್ಯಕ್ಷರಾಗಿ ದುಡಿಯುತ್ತಿದ್ದರು. ಊರಿನ ಮಡಿವಾಳರಾಗಿಯೂ ಕೆಲಸ ಮಾಡುತಿದ್ದರು.
ಮೃತರು ಪತ್ನಿ ಪುಷ್ಪಾವತಿ, ಪುತ್ರ ಜಯಪ್ರಕಾಶ್, ಪುತ್ರಿಯರಾದ ಅನಿತಾ, ರಂಜಿನಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.