Home ನಿಧನ ಉಬರಡ್ಕ : ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಉಬರಡ್ಕ : ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

0

ಮಾವಿನ ಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಉಬರಡ್ಕದಲ್ಲಿ ನಡೆದಿದೆ.


ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ ಮೃತಪಟ್ಟವರು.

ಅವರು ಮಾ.೨೨ರಂದು ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದು ಇವರು ಕೂಡಾ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

NO COMMENTS

error: Content is protected !!
Breaking