ಪಂಚ ಗ್ಯಾರಂಟಿ ಅನುದಾನ ಯೋಜನೆ ಅಡಿಯಲ್ಲಿ ಸುಳ್ಯ ತಾಲೂಕಿಗೆ 180 ಕೋಟಿ ಅನುದಾನ ಬಂದಿದೆ

0

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಹೇಳಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಸರ್ಕಾರ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಜನತೆಗೆ ಜಾರಿಗೆ ತಂದಿದ್ದು ಇಂದಿಗೆ ಕೋಟಿ ಗಟ್ಟಲೆ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
180 ಕೋಟಿ ರೂಪಾಯಿಗಳ ಅನುದಾನ ಸುಳ್ಯ ತಾಲೂಕಿನ ಫಲಾನುಭವಿಗಳ ಕೈ ಸೇರಿದೆ ಎಂದು ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತಮೊಟ್ಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 26 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದಿಂದ ಸುಳ್ಯ ತಾಲೂಕಿಗೆ ಯಾವುದೇ ಅನುದಾನ ಬರಲಿಲ್ಲ ಎಂದು ಹೇಳುವವರಿಗೆ ಇದೊಂದು ಉತ್ತರವಾಗಿದೆ ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳು ಪಡೆದುಕೊಂಡದ್ದಾರೆ.
ಸುಳ್ಯ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 26 ಸಾವಿರಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಸುಮಾರು 83 ಕೋಟಿ ರೂಪಾಯಿಗಳ ಯೋಜನೆಯನ್ನು ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಸುಮಾರು 17,500ಕ್ಕೂ ಹೆಚ್ಚು ಫಲಾನುಭವಿಗಳು ಸುಮಾರು ೨೦ ಕೋಟಿಗೂ ಹೆಚ್ಚು ರೂಗಳ ಅಕ್ಕಿಯನ್ನು ಪಡೆದುಕೊಂಡಿರುತ್ತಾರೆ. ಯುವ ನಿಧಿ ಯೋಜನೆಯಲ್ಲಿ ಸುಳ್ಯ ತಾಲೂಕಿನಲ್ಲಿ 289 ಫಲಾನುಭವಿಗಳು ಈ ವರೇಗೆ ಸುಮಾರು 50.34 ಲಕ್ಷ ರೂಪಾಯಿಗಳ ಅನುದಾನ ಪಡೆದಿದ್ದು ಗ್ರಹ ಜ್ಯೋತಿ ಯೋಜನೆಯಲ್ಲಿ 36,900 ಫಲಾನುಭವಿಗಳು ಸುಮಾರು 43 ಕೋಟಿ ರೂ. ಯೋಜನೆಯನ್ನು ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆಯಲ್ಲಿ ಸುಮಾರು 33 ಕೋಟಿ 69 ಲಕ್ಷ ರೂಪಾಯಿಗೂ ಹೆಚ್ಚು ಅನುದಾನವನ್ನು ಪಡೆದುಕೊಂಡಿರುತ್ತಾರೆ ಎಂದು ಈವರೆಗಿನ ಅಂಕಿ ಅಂಶಗಳನ್ನು ವಿವರಿಸಿದರು.


ಈ ವೇಳೆ ಮಾತನಾಡಿರುವ ಅವರು ಸುಳ್ಯ ತಾಲೂಕಿಗೆ ಸರ್ಕಾರದಿಂದ ಯಾವುದೇ ಅನುದಾನಗಳು ಬರಲಿಲ್ಲ ಎಂದು ಹೇಳುವವರಿಗೆ ಇದು ಉತ್ತಮ ನಿರ್ದೇಶನವಾಗಿದೆ. ಕಾರಣ ಈ ಎಲ್ಲಾ ಯೋಜನೆಗಳು ನೇರವಾಗಿ ಫಲಾನುಭವಿಗಳ ಕೈ ಗೆ ಬಂದು ಸೇರಿದಂತಾಗಿದೆ ಎಂದರು.
ಈ ವೇಳೆ ಸುಳ್ಯದಲ್ಲಿ ಉಂಟಾಗಿರುವ ಗ್ರಾಮೀಣ ಭಾಗದ ಬಸ್ಸುಗಳ ಸಮಸ್ಯೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಮಸ್ಯೆಗೆ ಕಾರಣ ಬಸ್ಸುಗಳ ಕೊರತೆ ಅಲ್ಲ. ಚಾಲಕ ನಿರ್ವಾಹಕರ ಕೊರತೆ ಆಗಿದೆ. ಅದಕ್ಕೆ ನಮ್ಮ ಕ್ಷೇತ್ರದ ಶಾಸಕರ ಪ್ರಯತ್ನ ಬೇಕಾಗಿದೆ.
ಈ ಬಗ್ಗೆ ಕಳೆದ ಎಂಟು ತಿಂಗಳುಗಳಿಂದ ಸಭೆ ಕರೆಯಲು ಸಂಭಂದಪಟ್ಟ ಇಲಾಖೆಗೆ ಹೇಳಿದ್ದೇವೆ. ಆದರೆ ನಮ್ಮ ಶಾಸಕರಿಗೆ ಸಮಯವಿಲ್ಲ ಎಂದು ವಿಳಂಬ ಆಗುತ್ತಿದೆ. ಆದ್ದರಿಂದ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.


ಅಲ್ಲದೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಜನತೆಗೆ ನೀಡಿರುವ ಭರವಸೆಯನ್ನು ಪರಿಪೂರ್ಣವಾಗಿ ಈಡೇರಿಸುತ್ತಾ ಬಂದಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಕೆಲವು ತಿಂಗಳುಗಳು ಅಲ್ಪ ಸ್ವಲ್ಪ ಆಚೆ ಈಚೆ ಆಗಿರಬಹುದು. ಅದನ್ನು ಬಿಜೆಪಿಯವರು ಬೇಗ ಪ್ರಶ್ನೆ ಮಾಡುತ್ತಾರೆ ಆದರೆ ನಮ್ಮ ಶಾಸಕರ ವ್ಯಾಪ್ತಿಯಲ್ಲಿರುವ ಸುಳ್ಯದ ಅಂಬೇಡ್ಕರ್ ಭವನ,ತಾಲೂಕು ಕ್ರೀಡಾಂಗಣ ಮುಂತಾದ ನೆಲೆಗುದಿಗೆ ಬಿದ್ದಿರುವ ಕಾಮಗಾರಿಗಳ ವಿಳಂಬದ ಬಗ್ಗೆ ಬಿಜೆಪಿಯವರು ಯಾರು ಮಾತಾಡುವುದಿಲ್ಲ ಮತ್ತು ಅದನ್ನು ಶಾಸಕರಲ್ಲಿ ಪ್ರಶ್ನೆ ಮಾಡುತ್ತಿಲ್ಲ ಎಂದು ಹೇಳಿದರು.

ಸುಳ್ಯ ತಾಲೂಕು ಸಮಿತಿಯ ವತಿಯಿಂದ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಉತ್ತಮ ಕೆಲಸ ಕಾರ್ಯಕ್ರಮಗಳು ನಡೆಯುತಿದ್ದು ಈ ಬಗ್ಗೆ ಜನತೆಗೆ ಉತ್ತಮ ಸ್ಪಂದನೆಯನ್ನು ನಾವು ನೀಡುತ್ತಾ ಬಂದಿದ್ದೇವೆ ಮತ್ತು ನಮ್ಮ ಸಮಿತಿಯ ಎಲ್ಲಾ ಸದಸ್ಯರುಗಳು ಇದಕ್ಕೆ ಉತ್ತಮ ಸಹಕಾರ ನೀಡು ತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಭವಾನಿ ಶಂಕರ್ ಕಲ್ಮಡ್ಕ,ಧನುಷ್ ಕುಕ್ಕೇಟಿ, ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ, ಮಣಿ ಕಂಠ ಕೊಳಗೆ, ಲತೀಫ್ ಅಡ್ಕಾರ್, ಭವಾನಿ ಬೊಮ್ಮೆಟ್ಟಿ,ಶಾಂತಿ ಬಿ ಎಸ್, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಕ,ಮೊದಲಾದ ವರು ಉಪಸ್ಥಿತರಿದ್ದರು.