
ಸುಳ್ಯ ಶ್ರೀ ರಾಂಪೇಟೆಯ ಮುಖ್ಯ ರಸ್ತೆಯಲ್ಲಿ
ಶ್ರೀ ಹರಿ ಕಾಂಪ್ಲೆಕ್ಸ್ ಎದುರುಗಡೆ ಬೊಲೆರೋ ವಾಹನಕ್ಕೆಹಿಂಬದಿಯಿಂದ ಬಂದ ಸ್ಕೂಟಿಯೊಂದು ಡಿಕ್ಕಿ ಹೊಡೆದ ಘಟನೆ ಇದೀಗ ಸಂಭವಿಸಿದೆ.
ಸುಳ್ಯದಲ್ಲಿ ಮಹಾದೇವ ಫ್ಲವರ್ ಸ್ಟಾಲ್ ಮಾಲಕ ಮಾಧವ ರವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೆರೋ ಗೆ ಶ್ರೀ ರಾಂಪೇಟೆಯ ಕಡೆಯಿಂದ ಬಂದ ಸ್ಕೂಟಿ ಹಿಂದುಗಡೆಯಿಂದ ಡಿಕ್ಕಿ ಹೊಡೆಯಿತು.




ಎದುರಿನಿಂದ ಸಂಚರಿಸುತ್ತಿದ್ದ ವಾಹನವೊಂದು
ಶ್ರೀ ಹರಿ ಕಾಂಪ್ಲೆಕ್ಸ್ ಕಡೆಗೆ ತಿರುಗುತ್ತಿರುವ ಸಂದರ್ಭದಲ್ಲಿ ಬೊಲೆರೋ ಸಡನ್ ಬ್ರೇಕ್ ಹಾಕಿದಾಗ ಹಿಂಬದಿಯಿಂದ ಬಂದ ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದರು.
ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ವಾಹನದ ಹಿಂಬದಿ ಜಖಂಗೊಂಡಿದೆ. ಸ್ಕೂಟಿ ಎದುರು ಭಾಗಕ್ಕೆ ಹಾನಿಯಾಗಿದೆ.