ದಾನ ಧರ್ಮವೇ ಶ್ರೇಷ್ಠ: ಸಮಾಜಕ್ಕೆ ಸದಾ ಸಹಾಯ ಹಸ್ತ ಚಾಚುವ ಯುವ ಉದ್ಯಮಿ ಲತೀಫ್ ಹರ್ಲಡ್ಕ

0

ರಂಝಾನ್ ಪ್ರಯುಕ್ತ ಉದ್ಯಮಿ ಲತೀಫ್ ಹರ್ಲಡ್ಕ ಅವರಿಂದ 450 ಕ್ಕೂ ಅಧಿಕ ಜನರಿಗೆ ವಸ್ತ್ರದಾನ ಹಾಗೂ ಕಿಟ್ ವಿತರಣೆ…!

ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ವಚನವಿದೆ. ನಾವು ಎಷ್ಟೇ ಸಂಪಾದನೆ ಮಾಡಿದರೂ ನಮಗಾಗಿ ಉಳಿಯುವುದು ನಾವು ಮಾಡಿದ ಆ ದಾನ ಧರ್ಮ ಮಾತ್ರ. ಈ ಹಿನ್ನಲೆ ತನ್ನ ಸಂಪಾದನೆಯ ಒಂದು ಭಾಗವನ್ನು ನಿರಂತರವಾಗಿ ದಾನ ಮಾಡುವ ಮೂಲಕ ಮಾದರಿಯಾದವರು ಸುಳ್ಯದ ಯುವ ಉದ್ಯಮಿ ಲತೀಫ್ ಹರ್ಲಡ್ಕ. ಈ ರಂಝಾನ್ ತಿಂಗಳಿನಲ್ಲಿಯೂ ತನ್ನ ದಾನದ ಮೂಲಕ ಪರರ ಹೃದಯ ಗೆದ್ದಿದ್ದಾರೆ ಲತೀಫ್.

ಇಸ್ಲಾಮಿನಲ್ಲಿ ಹದೀಸ್ ವಚನವೊಂದು ಹೇಳುತ್ತದೆ ಎರಡು ವ್ಯಕ್ತಿಗಳ ವಿಚಾರದಲ್ಲಿ ಅಸೂಯಪಡುವುದಕ್ಕೆ ಯಾವುದೇ ತಡೆಯಿಲ್ಲ ಎಂದಿದೆ. ಆ ಹದೀಸ್ ವಚನ ವೆಂದರೆ ಎರಡು ವ್ಯಕ್ತಿಗಳ ಹೊರತು ಬೇರೆ ಯಾರೊಂದಿಗೂ ಅಸೂಯೆ ಸಲ್ಲದು. ಒಬ್ಬ, ಅಲ್ಲಾಹನು ಧಾರಾಳ ಸಂಪತ್ತನ್ನು ನೀಡಿ ಅದನ್ನು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕೆ ಸೌಭಾಗ್ಯ ಲಭಿಸಿದವನು. ಮತ್ತೊಬ್ಬ, ಅಲ್ಲಾಹನ ಪ್ರಭೆಯಾಗಿರುವ ಜ್ಞಾನವನ್ನು ಸಂಪಾದಿಸಿ ಅದನ್ನು ಪಸರಿಸುವವನು ಅದರ ಪ್ರಕಾರ ನಡೆಯುವವನು”.
ಈ ಹದೀಸಿನಲ್ಲಿರುವ ಮೊದಲ ವಿಭಾಗಕ್ಕೆ ಸರಿಯಾಗಿ ಬದುಕಿ ತನಗೆ ಲಭಿಸಿದ ಸಂಪತ್ತನ್ನು ಸಮಾಜಕ್ಕೆ ಧಾರೆಯೆರೆಯುವವರು, ದಾನ ಧರ್ಮದ ಮೂಲಕ ಜನರ ಹೃದಯದಲ್ಲಿ ಸ್ಥಾನ ಪಡೆದವರು ಲತೀಫ್ ಹರ್ಲಡ್ಕ. ಲತೀಫ್ ತಾನು ಪಡೆದ ಸಂಪತ್ತಿನ ಒಂದು ಭಾಗವನ್ನು ಈ ಸಮುದಾಯದ ಬಡವರಿಗೆ, ಅಶಕ್ತರಿಗೆ, ಅನಾಥರಿಗೆ ಧಾರೆಯೆರೆಯುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ರಂಝಾನ್ ಪ್ರಯುಕ್ತ ಅವರು 450 ಮಂದಿ ಉಸ್ತಾದರು ಮತ್ತು ಮುತಾಲ್ಲಿಮರಿಗೆ ಹಾಗೂ ಅರ್ಹ ಬಡವರಿಗೆ ರಂಝಾನ್ ಹಬ್ಬದ ವಸ್ತ್ರವನ್ನು ವಿತರಿಸಿ ರಂಜಾನ್ ಕಿಟ್ ನೀಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಾಡಿದ್ದಾರೆ. ಅಲ್ಲದೆ ಬಡವರಿಗೆ, ಅನಾಥರಿಗೆ ಸಮಾಜದ ಅಶಕ್ತ ವರ್ಗಕ್ಕೆ ವಸ್ತ್ರ, ಆಹಾರ ಕಿಟ್ ಸೇರಿದಂತೆ ಅನೇಕ ರೀತಿಯಲ್ಲಿ ದಾನ ಮಾಡಿದ್ದಾರೆ.

ಲತೀಫ್ ಅವರದ್ದು ಸರಳ ವ್ಯಕ್ತಿತ್ವ, ಎಲ್ಲರೊಂದಿಗೂ ಆತ್ಮೀಯ, ಪ್ರೀತಿಯ ಒಡನಾಟ, ಮನೆಗೆ ಬಂದವರನ್ನು ಹೃದಯಪೂರ್ವಕ ಆತಿಥ್ಯ ನೀಡುವ ದೊಡ್ಡ ಮನಸ್ಸು. ಊಟ, ಉಪಚಾರ ನೀಡಿ, ಸನ್ಮಾನಿಸಿ ಬೀಳ್ಕೊಡುವುದು ಅವರ ಸಂಪ್ರದಾಯ. ಸಮಾಜದಲ್ಲಿ ಯಾರೇ ಆಗಲಿ ಅಗತ್ಯವಿರುವವರಿಗೆ ತನ್ನಿಂದಾಗುವ ಸಹಾಯ, ಆಸರೆ ನೀಡುತ್ತಾರೆ. ಮದ್ರಸ ವಿದ್ಯಾರ್ಥಿಗಳಿಗೂ, ಉಸ್ತಾದರಿಗಳಿಗೂ ಅವರು ಪ್ರತಿ ವರ್ಷ ರಂಝಾನ್ ವಸ್ತ್ರ ನೀಡುತ್ತಾರೆ. ತನ್ನ ಕೈಯಿಂದಾಗುವ, ಆರ್ಥಿಕ ಸಹಾಯ ಒದಗಿಸುತ್ತಾರೆ.
ಹಲವು ಸಂಘ ಸಂಸ್ಥೆಗಳಿಗೆ, ಸಮಾಜ ಸೇವೆಗೆ ತನ್ನ ಆದಾಯದ ಒಂದಂಶವನ್ನು ಅವರು ಪ್ರತಿ ವರ್ಷ ನೀಡುತ್ತಾರೆ. ಯಾರು ಕೇಳಿದರೂ ಇಲ್ಲಾ ಎನ್ನುವುದಿಲ್ಲ ಲತೀಫ್ ರವರು ಎಲಿಮಲೆಯ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸಂಸ್ಥೆಯ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸ್ಥೆಯ ೪೦ನೇ ವರ್ಷಾಚರಣೆ ರೂಬಿ ಜೂಬಿಲಿ ಆಚರಿಸಿ 40 ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಅನೇಕ ಬಡವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಸಾಂದೀಪ್ ವಿಶೇಷ ಮಕ್ಕಳ ಶಾಲೆ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ,ಹಾಗೂ ಕಾವಿನಲ್ಲಿರುವ ದಹವ ಶಿಕ್ಷಣ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆ ಸೇರಿ ವಿವಿಧ ಸೌಲಭ್ಯವನ್ನು ನುಸ್ರತ್ ಜೊತೆ ಸೇರಿ ಮಾಡಿರುತ್ತಾರೆ, ಅನೇಕ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯಹಸ್ತ ಚಾಚಿದ್ದಾರೆ. ಬಡ ಮಹಿಳೆಯರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಯಾಗಿ ಸಂಸ್ಥೆ ಶ್ರೇಯೊಭಿವೃದ್ದಿಯಲ್ಲಿ ನಿರಂತರ ಶ್ರಮದೊಂದಿಗೆ ಸಂಸ್ಥೆಯ ಪ್ರತಿ ಅಭಿವೃದ್ಧಿ ಕೆಲಸಗಳಿಗೂ ಆರ್ಥಿಕ ಸಹಾಯವನ್ನು ನಿಡುತ್ತಿರುವ ಇವರು ಸಂಸ್ಥೆಯಲ್ಲಿ ದುಡಿಯುತ್ತಿರುವ ಇತರ ಕೆಲಸಗಾರರಿಗೂ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಅಲ್ಲಿ ಸೇವೆ ನೀಡುತ್ತಿರುವ ಶಿಕ್ಷಕರಿಗಾಗಲಿ ಅವರ ಸಮಸ್ಯೆಗಳಿಗೂ ಸ್ಪಂದಿಸಿ ಸಣ್ಣ ಪುಟ್ಡ ಅರ್ಥಿಕ ಸಹಾಯವನ್ನು ನೀಡಿ ಅವರಿಗೆ ನೆರವಾಗುವ ಸಹೃದಯಿ ಮನಸ್ದಿನ ಒಡೆಯ ಲತೀಫ್ ಹರ್ಲಡ್ಕ.

ಇದೀಗ ಇಸ್ಲಾಮಿನ ಪುಣ್ಯ ದಿನಗಳಾದ ರಂಝಾನ್ ತಿಂಗಳಲ್ಲಿ ವಸ್ತ್ರ, ಆಹಾರ ಕಿಟ್‌ಗಳ ಮೂಲಕ ದಾನ, ಧರ್ಮ ಸಹಾಯ ಮಾಡುವ ಮೂಲಕ ಲತೀಫ್ ತನ್ನ ದಾನ ಧರ್ಮವನ್ನು ಮುಂದುವರಿಸಿದ್ದಾರೆ.
ಈ ಹಿಂದೆ ಕೊರೊನಾ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ ಸುಳ್ಯ ಮಾತ್ರವಲ್ಲದೆ ಪಕ್ಕದ ಕೊಡಗು ಜಿಲ್ಲೆಯಲ್ಲೂ ಅನೇಕ ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿದ್ದಾರೆ. ಅನ್ಸರಿಯಾ, ಅನ್ಸಾರ್, ನುಸ್ರತ್ ಎಲಿಮಲೆ ಸೇರಿ ಹಲವು ಸಂಸ್ಥೆಗಳಲ್ಲಿ ಸಕ್ರೀಯವಾಗಿ ದುಡಿದು ತನ್ನ ಕೈಲಾಗುವ ಸಹಾಯವನ್ನು ನೀಡುತ್ತಾ ಬಂದಿರುತ್ತಾರೆ ಇವರು ದಾನ ಮಾಡುವಾಗ ಜಾತಿ, ಧರ್ಮ,ಪಥ,ಪಂಗಡಗಳು ನೋಡ ವುದ್ದಿಲ್ಲ ಇಂತಹ ನಿಷ್ಕಳಂಕ ಹೃದಯದಿಂದ ಅವರು ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸುಲ್ತಾನ್ ನುಲ್ ಉಲಮಾ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ಕಾಂತಪುರಂ,ಸಮಸ್ತ ಅಧ್ಯಕ್ಷ ಸಯ್ಯದುಲ್ ಉಲಮಾ ಜಿಪ್ರಿ ಮುತ್ತುಕೋಯ ತಂಙಳ್, ಬದ್ರುಸಾದತ್ ಅಖಿಲ ಭಾರತೀಯ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಯಾದಿಯಾಗಿ ಅನೇಕ ಉಲಮಾಗಳು ಇವರ ಮನೆಗೆ ಭೇಟಿ ಶುಭಾಶಿರ್ವಾದ ನೀಡಿ ಇವರ ಸೇವೆಯನ್ನು ಪ್ರಶಂಸೆ ಮಾಡಿ ಇವರ ಸೇವೆ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದ್ದಾರೆ.
ಇವರ ಸೇವೆ ಸಮಾಜಕ್ಕೆ ತಿಳಿಯಲಿ ಎಂಬ ಉದ್ದೇಶಕ್ಕೆ ಈ ಲೇಖನವನ್ನು ಬರೆದಿರುತ್ತೇನೆ. ಇತ್ತೀಚಿನ ದಿನಗಳ ಇಂತಹ ವ್ಯಕ್ತಿಗಳನ್ನು ಗುರುತಿಸುವುದು ಬಹಳ ವಿರಳವಾಗಿದೆ ಅದರಿಂದ ಸಮಾಜ ಇಂತಹ ವ್ಯಕ್ತಿಗಳನ್ನು ಗುರುತಿಸುವಂತಾಗಬೇಕು ಎಂದು ಹಾರೈಸುವುದರೊಂದಿಗೆ ಇವರ ಸೇವೆಗೆ ತಕ್ಕದಾದ ಪ್ರತಿಫಲವನ್ನು ಸರ್ವಶಕ್ತನಾದ ದೇವರು ನೀಡಲಿ.

ಅಬೂಬಿಲಾಲ್