ಮಾ. 25 ರಂದು ಸಂಜೆ ಸುರಿದ ಮಳೆ ಹಾಗೂ ಭೀಕರ ಸುಂಟರಗಾಳಿಯ ಪರಿಣಾಮ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೆಗೆ ಹಾಕಿದ್ದ ಶಾಮಿಯಾನ ಸಂಪೂರ್ಣ ಮಗುಚಿ ಬಿದ್ದು ಹರಿದು ಹೋಗಿ ಕಬ್ಬಿಣದ ಪೈಪುಗಳಿಗೆ ಸಹ ಹಾನಿಯಾದ ಘಟನೆ ವರದಿಯಾಗಿದೆ.

ಇದರಿಂದಾಗಿ ಶಾಮಿಯಾನದ ಮಾಲಕ ಉಳುವಾರು ಕುಸುಮಾಧರರವರಿಗೆ ಅಂದಾಜು ಮೂರು ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ ದೇವಸ್ಥಾನದ ಕಟ್ಟಡಗಳ ಹಂಚು ಹಾರಿ ಹಾನಿಯುಂಟಾಗಿದ್ದು ಅದನ್ನು ರಾತ್ರಿಯೆ ಸ್ಥಳೀಯರು ದುರಸ್ತಿ ಮಾಡಿ ಕ್ಷೇತ್ರದ ಪ್ರಾಂಗಣವನ್ನು ಶುಚಿತ್ವಗೊಳಿಸಿದ್ದಾರೆ.


