Home Uncategorized ಅಲೆಕ್ಕಾಡಿ : ದೇವರಮಜಲಿನಲ್ಲಿ ಮೋರಿ ಕುಸಿತ , ಸಂಪರ್ಕ ರಸ್ತೆ ಕಡಿತ ಸಂಭವ

ಅಲೆಕ್ಕಾಡಿ : ದೇವರಮಜಲಿನಲ್ಲಿ ಮೋರಿ ಕುಸಿತ , ಸಂಪರ್ಕ ರಸ್ತೆ ಕಡಿತ ಸಂಭವ

0

ಕಡಬ -ಎಡಮಂಗಲ -ಅಲೆಕ್ಕಾಡಿ ಪಿಡಬ್ಲ್ಯುಡಿ ರಸ್ತೆಯ ಕೇರ್ಪಡ ದೇವರಮಜಲಿನಲ್ಲಿ ಮೋರಿ ಕುಸಿದು ಬಿದ್ದು ಒಂದು ವರ್ಷ ಕಳೆಯಿತು. ಸ್ಥಳೀಯರ ಅಗ್ರಹದಂತೆ ಸುದ್ದಿ ಪತ್ರಿಕೆ ವರದಿ ಮಾಡಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಕಾಮಗಾರಿಗಳು ಆರಂಭಗೊಂಡಿಲ್ಲ.


ಮಳೆಗಾಲದಲ್ಲಿ ಬಯಲು ಪ್ರದೇಶದಿಂದ ತೋಡು ತುಂಬಿ ಮಳೆ ನೀರು ಧಮುಕುವಾಗ ರಸ್ತೆ ಕೊಚ್ಚಿ ಹೋಗುತ್ತಿದೆ, ಅಭಿವೃದ್ಧಿ ಹೊಂದುವ ಕಾಲ ಘಟ್ಟದಲ್ಲಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಭೀತಿಯಿಂದ ಸ್ಥಳೀಯರು ಪತ್ರಿಕೆಯ ಮೂಲಕ ಅಗ್ರಹಿಸಿದ್ದಾರೆ. ಸಂಭಂದಪಟ್ಟ ಇಲಾಖೆ ಯವರು ಇತ ಗಮನ ಹರಿಸಿ ಬಗೆಹರಿಸುವುದು ಒಳ್ಳೆಯದು ಎಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

error: Content is protected !!
Breaking