
ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಮಾ.29ರಂದು ಆಚರಿಸಲಾಯಿತು.

ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು.



ಶಿಕ್ಷಕರಾದ ಶ್ರೀಮತಿ ಲಕ್ಷ್ಮಿ ಶೆಟ್ಟಿ, ಪ್ರಮೀಳ, ದೀಕ್ಷಾ, ಸುಕನ್ಯರವರು ಸಹಕರಿಸಿದರು.
ಪುಟಾಣಿ ಮಕ್ಕಳು ಬಣ್ಣದ ಉಡುಪು ಹಾಗೂ ಸಿಹಿತಿಂಡಿ, ಬೇವು ಬೆಲ್ಲ ತಿಂದು ಖುಷಿ ಪಟ್ಟರು.