Home ಪ್ರಚಲಿತ ಸುದ್ದಿ ಮಾ.27 ದ.ಕ ಸಂಪಾಜೆ ಗ್ರಾಂ. ಪಂ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಧ ನಿರೋಧಕ ಲಸಿಕಾ...

ಮಾ.27 ದ.ಕ ಸಂಪಾಜೆ ಗ್ರಾಂ. ಪಂ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಧ ನಿರೋಧಕ ಲಸಿಕಾ ಶಿಬಿರ

0

ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಕೀಯ ಸೇವಾ ಇಲಾಖೆ ಸುಳ್ಯ ಹಾಗೂ ಸಂಪಾಜೆ ಗ್ರಾಂ.ಪಂ ಸಹಯೋಗದಲ್ಲಿ ಮಾ.27ರಂದು ನಾಯಿಗಳಿಗೆ ಉಚಿತ ರೇಬಿಸ್ ರೋಧ ನಿರೋಧಕ ಲಸಿಕಾ ಶಿಬಿರವು ನಡೆಯಲಿದೆ.

ಬೆಳಿಗ್ಗೆ 9.30 ಗಂಟೆಗೆ ಗ್ರಾಮ ಪಂಚಾಯತ್ , 10 ಗಂಟೆಗೆ ಕೈಪಡ್ಕ ಸೆಲ್ವ ರಾಜ್ ಮನೆ ಬಳಿ ,10.15 ಕ್ಕೆ ಸಂಪಾಜೆ ಗಡಿಕಲ್ಲು ಬಸ್ ಸ್ಟಾಂಡ್ ಬಳಿ, 10.35 ಕ್ಕೆ ಕಲ್ಲುಗುಂಡಿ ಅಂಚೆ ಕಚೇರಿ , 10.50 ಕ್ಕೆ ದಂಡೆ ಕಜೆ ಟ್ಯಾಂಕ್ ಬಳಿ , 11.5ಕ್ಕೆ ಕಡೆಪಾಲ ಬಸ್ ಸ್ಟಾಂಡ್, 11.30ಕ್ಕೆ ರಾಜಾರಾಂಪುರ ಬಸ್ ನಿಲ್ದಾಣ , 11.35 ಕ್ಕೆ ಗೂನಡ್ಕ ಬಸ್ ನಿಲ್ದಾಣ ,12ಕ್ಕೆ ಪೇರಡ್ಕ ಸೇತುವೆ ಬಳಿ ಲಸಿಕಾ ಶಿಬಿರ ನಡೆಯಲಿದೆ. ಸಾವರ್ಜನಿಕರು ತಮ್ಮ ಸಾಕು ನಾಯಿಗಳನ್ನು ಲಸಿಕೆ ನಡೆಯುವ ಸ್ಥಳಕ್ಕೆ ಕರೆತಂದು ಲಸಿಕೆ ಹಾಕಿಸಿಕೊಳ್ಳುವುದು , ಹಾಗೂ ಲಸಿಕಾ ಕೇಂದ್ರ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಲಸಿಕೆಯನ್ನು ನೀಡಲಾಗುವುದಿಲ್ಲ ಎಂದು ಎಂದು ಗ್ರಾಮ ಪಂಚಾಯತ್ ಹಾಗೂ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

error: Content is protected !!
Breaking