ಪೆರುವಾಜೆ ಶಾಲಾ ನಿವೃತ್ತ ಶಿಕ್ಷಕ ತೇಜಪ್ಪ ಮಾಸ್ತರ್, ಶಿಕ್ಷಕಿ ಲಲಿತಾ, ಸಾಹಿತಿ ಕೆ.ಅಕ್ಷತಾ ನಾಗನಕಜೆ ಯವರಿಗೆ ಸನ್ಮಾನ

ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿಯವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದು ಅವರಿಗೆ ಸನ್ಮಾನ ,ಬೀಳ್ಕೊಡುಗೆ ಕಾರ್ಯಕ್ರಮವು ಪಂಚಾಯತ್ ಸಭಾಂಗಣದಲ್ಲಿ ಮಾ.29 ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾಯವರು ಅಧ್ಯಕ್ಷತೆ ವಹಿಸಿ ನಿವೃತ್ತರಿಗೆ ಶುಭಹಾರೈಸಿ ಮಾತನಾಡಿದರು.
ಜಯಪ್ರಕಾಶ್ ಅಲೆಕ್ಕಾಡಿ ಮತ್ತು ಶ್ರೀಮತಿ ಭಾರತಿ ದಂಪತಿಗಳನ್ನು ಮಾಜಿ ಮಂಡಲ ಪ್ರಧಾನರಾದ ಪಿಜಾವು ಜಗನ್ನಾಥ ರೈ ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣರವರು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಪೆರುವಾಜೆ ಶಾಲಾ ನಿವೃತ್ತ ಶಿಕ್ಷಕ ತೇಜಪ್ಪ ಸಂಪ್ಯಾಡಿ,ಮತ್ತು ನಿವೃತ್ತಿಗೊಳ್ಳಲಿರುವ ಶಿಕ್ಷಕಿ ಶ್ರೀಮತಿ ಲಲಿತಾರವರನ್ನು ಹಾಗೂ ಪಂಚಾಯತ್ ಸಿಬ್ಬಂದಿ ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಅಕ್ಷತಾರವರನ್ನು ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್, ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ,ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಸಾಹಿತಿ ಅಶ್ವಿನಿ ಕೋಡಿಬೈಲ್, ಸುದ್ದಿ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್,ಪಿಡಿಒ ತಿರುಮಲೇಶ್ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಜಯಲಕ್ಷ್ಮೀ ಪ್ರಾರ್ಥಿಸಿ,ಸಚಿನ್ ರಾಜ್ ಶೆಟ್ಟಿ ಸ್ವಾಗತಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ ವಂದಿಸಿದರು.
ಪಂಚಾಯತ್ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ,ಮಾಧವ,ಶ್ರೀಮತಿ ಚಂದ್ರಾವತಿ,ಶ್ರೀಮತಿ ಗುಲಾಬಿ,ಪದ್ಮನಾಭ ಶೆಟ್ಟಿ ಪೆರುವಾಜೆ,ಶ್ರೀಮತಿ ರೇವತಿ ಹಾಗೂ ಸಿಬ್ಬಂದಿ ವರ್ಗದವರು ,ಗ್ರಾಮಸ್ಥರು ಉಪಸ್ಥಿತರಿದ್ದರು.
ಸನ್ಮಾನ ನಡೆದ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ



ಸನ್ಮಾನ ಕಾರ್ಯಕ್ರಮ ನಡೆದ ಬಳಿಕ ಭೋಜನ ಸ್ವೀಕರಿಸಲಾಯಿತು.

ಬಳಿಕ ನಿವೃತ್ತ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿಯವರನ್ನು ಹೂಮಾಲೆ ಹಾಕಿ ಸಿಂಗರಿಸಿದ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಯಿತು.
ಪೆರುವಾಜೆ ಪಂಚಾಯತ್ ನಿಂದ ಬೆಳ್ಳಾರೆ ಮುಖ್ಯ ರಸ್ತೆಯಾಗಿ ಹಲವು ವಾಹನಗಳಲ್ಲಿ ಮೆರವಣಿಗೆ ಮೂಲಕ ಅಲೆಕ್ಕಾಡಿ ಮನೆವರೆಗೆ ಮೆರವಣಿಗೆ ನಡೆಯಿತು.
ಹಲವು ಮಂದಿ ವಾಹನ ಮೆರವಣಿಗೆಯಲ್ಲಿ ಪಾಲ್ಗೊಂಡರು.