ಅರಂತೋಡು ಗ್ರಾಮದ ಮೇಲಡ್ತಲೆಯ ಲೋಹಿತ್ ಎಂಬವರ ತೋಟಕ್ಕೆ ಮಾ.೨೫ರಂದು ರಾತ್ರಿ ಕಾಡಾನೆ ಬಂದು ಕೃಷಿ ಹಾಳುಗೆಡವಿರುವುದಾಗಿ ವರದಿಯಾಗಿದೆ.

ಅಡಿಕೆ, ಬಾಳೆ, ಕೊಕ್ಕೊ ಗಿಡಗಳು ಪುಡಿಯಾಗಿರುವುದಾಗಿ ತಿಳಿದುಬಂದಿದೆ.

ಅನೇಕ ತಿಂಗಳಿನಿಂದ ಅಡ್ತಲೆ ಪರಿಸರದಲ್ಲಿ ಆನೆಗಳು ಬೀಡು ಬಿಟ್ಟಿದ್ದು ಆಗಾಗ್ಗೆ ಕೃಷಿ ತೋಟಕ್ಕೆ ಬಂದು ಕೃಷಿ ನಾಶ ಮಾಡುತ್ತಿದೆ. ಕಾಡುಕೋಣಗಳ ಹಾವಳಿಯು ಇದೆ ಎಂದು ತಿಳಿದುಬಂದಿದೆ.