ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ

0

ಗ್ರಾಮ ಮಟ್ಟದ ಗ್ಯಾರಂಟಿ ವಿಲೇವಾರಿ ಶಿಬಿರದಿಂದ ಉತ್ತಮ ಪ್ರಗತಿ : ಶಾಹುಲ್ ಹಮೀದ್ ಕುತ್ತಮೊಟ್ಟೆ

ಸುಳ್ಯ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಮಾ. ೨೬ರಂದು
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಗ್ರಹಲಕ್ಷ್ಮಿ ಯೋಜನೆಗೆ ಮನೆ ಒಡತಿಯ ತಂಬ್ ಹಾಗೂ ಆಧಾರ್ ಸಮಸ್ಯೆಯಿoದಾಗಿ ಇನ್ನೂ ಕೆಲವರ ಹೆಸರು ಸೇರ್ಪಡೆಯಾಗದ ಬಗ್ಗೆ, ಸರ್ಕಾರಿ ಬಸ್ ರೂಟ್ ವಿಸ್ತರಣೆ ಆಗಿ ಉದ್ಘಾಟನೆ ಸಂದರ್ಭ ಸ್ಥಳೀಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಆಹ್ವಾನಿಸದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಗ್ರಾಮ ಮಟ್ಟದ ಕ್ಯಾಂಪ್ ನಿಂದಾಗಿ ೪೧೪ ಹೊಸ ಅರ್ಜಿಗಳು ಗ್ರಹಲಕ್ಷ್ಮಿ ಯೋಜನೆಗೆ ಸಲ್ಲಿಕೆಯಾಗಿದೆ ಎಂದು ಸಿ ಡಿ ಪಿ ಓ ಸಭೆಗೆ ತಿಳಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಶಾಹುಲ್ ಹಮೀದ್ ರವರು ಗ್ರಾಮ ಮಟ್ಟದ ಶಿಬಿರದಿಂದ ಉತ್ತಮ ಪ್ರಗತಿ ಸಿಕ್ಕಿದೆ. ಸರಕಾರದ ಯೋಜನೆ ಪ್ರತಿಯೊಬ್ಬರಿಗೂ ಸಿಗಬೇಕು. ಮುಂದೆಯೂ ಶಿಬಿರ ನಡೆಸಲಾಗುವುದು ಎಂದರು.

ಎ ಪಿ ಎಲ್ ಪಡಿತರ ಕಾರ್ಡ್ ದಾರರಿಗೂ ಮೊದಲಿನಂತೆ ಕಡಿಮೆ ದರದಲ್ಲಿ ಅಕ್ಕಿ ಕೊಡುವ ಬಗ್ಗೆ ಜಿಲ್ಲಾ ಗ್ಯಾರಂಟಿ ಸಮಿತಿಯವರಿಗೆ ಮನವಿ ಕೊಡೋಣ ಎಂದು ಭವಾನಿಶಂಕರ್ ಸಲಹೆ ನೀಡಿದರು.

ಸಿಡಿಪಿಓ ಶೈಲಜಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೆದಾರ್ ವಸಂತಿ, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅನುರಾಧ, ಕೆಎಸ್‌ಆರ್‌ಟಿಸಿ ಯ ವ್ಯವಸ್ಥಾಪಕ ಅಬೂಸಾಲಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ
ಮಂಜುಷಾ ರವರು ತಮ್ಮ ತಮ್ಮ ಇಲಾಖೆಗಳ ಪ್ರಗತಿಯನ್ನು ವಾಚಿಸಿದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಣಿಕಂಠ ಕೊಳಗೆ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಕ,
ಧನುಷ್ ಕುಕ್ಕೆಟ್ಟಿ, ಭವಾನಿಶಂಕರ್ ಕಲ್ಮಡ್ಕ, ಕಾಂತಿ ಸಂಪಾಜೆ, ವಿಜೇಶ್ ಹಿರಿಯಡ್ಕ, ಲತೀಫ್ ಅಡ್ಕಾರು, ರವಿ ಗುಂಡಡ್ಕ, ಭವಾನಿ ಬೊಮ್ಮೆಟ್ಟಿ ಉಪಸ್ಥಿತರಿದ್ದರು.