ಕೂತ್ಕುಂಜ: ಹೆಬ್ಬಾರಹಿತ್ಲು ಕಾಂಕ್ರೀಟ್ ರಸ್ತೆ ಉದ್ಘಾಟನಾ ಕಾರ್ಯಕ್ರಮ

0

ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಕೂತ್ಕುಂಜ ಗ್ರಾಮದ ಹೆಬ್ಬಾರಹಿತ್ಲು ರಸ್ತೆ ಕಾಂಕ್ರೀಟ್ ಗೊಂಡಿದ್ದು ಇದದ ಉದ್ಘಾಟನಾ ಕಾರ್ಯಕ್ರಮ ಮಾ.26 ರಂದು ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಡಾ. ರಾಮಯ್ಯ ಭಟ್ಟ ಪಂಜ ,ಶಿವರಾಮಯ್ಯ ಕರ್ಮಜೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ,ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ನಿರ್ದೇಶಕರಾದ ಲಿಗೋಧರ ಆಚಾರ್ಯ ಎನ್,ತಿಮ್ಮಪ್ಪ ಗೌಡ ಕೂತ್ಕುಂಜ, ಕೂತ್ಕುಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತುಳಸಿ ಅಜ್ಜಿಹಿತ್ಲು, ವೆಂಕಟೇಶ್ವರ ಜೋಯಿಸ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ಮೊದಲಾದವರು ಹಾಗೂ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ಸ್ವಾಗತಿಸಿದರು. ಕಾರ್ಯಪ್ಪ ಗೌಡ ಚಿದ್ಗಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ ಯಚ್ ವಂದಿಸಿದರು.