Home Uncategorized ಇವಾ ಫಾತಿಮಾ ಬಶೀರ್ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಇವಾ ಫಾತಿಮಾ ಬಶೀರ್ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

0

ವಿಶೇಷ ದಾಖಲೆಯ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಇವಾ ಫಾತಿಮಾ ಬಶೀರ್ ಆಯ್ಕೆಯಾಗಿದ್ದಾಳೆ. 9 ವರ್ಷ ಪ್ರಾಯದಲ್ಲಿ 4 ಗಂಟೆ, 31 ನಿಮಿಷ ಮತ್ತು 38 ಸೆಕೆಂಡುಗಳ ಅವಧಿಯಲ್ಲಿ 6 ಇಂಗ್ಲಿಷ್ ಕಥಾ ಪುಸ್ತಕಗಳನ್ನು ನಿರಂತರವಾಗಿ ಓದಿ ದಾಖಲೆ ನಿರ್ಮಿಸಿದ್ದಕ್ಕಾಗಿ “IBR achiever” ಪಟ್ಟಿಯನ್ನು ಸೇರಿದಳು. ಈ ಪ್ರಶಸ್ತಿಯನ್ನು 29 ಮಾರ್ಚ್ 2025ರಂದು ಹರೀಯಾಣದ ಫರಿದಾಬಾದಿನಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೇಂದ್ರದಲ್ಲಿ ಸ್ವೀಕರಿಸಿದಳು.

ಯುಎಇ ಶಾರ್ಜಾದಲ್ಲಿರುವ ಜೆಮ್ಸ್ ಮಿಲೇನಿಯಂ ಸ್ಕೂಲ್ ನ ಮೂರನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಗಾಗಿ ಹಲವು ಪುರಸ್ಕಾರಗಳನ್ನು ಪಡೆದಿದ್ದಾಳೆ. ಪ್ರಸ್ತುತ ಶಾರ್ಜಾದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬಶೀರ್ ಅರಂಬೂರು ಮತ್ತು ಹಸೀನಾ ದಂಪತಿಗಳ ಪುತ್ರಿ.

NO COMMENTS

error: Content is protected !!
Breaking