ಇಂದು ಗೊನೆ ಮೂಹೂರ್ತ ಎ. 6ರಂದು ಧ್ವಜಾರೋಹಣ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಇಂದು ಗೊನೆ ಮುಹೂರ್ತ ದೊಂದಿಗೆ ಆರಂಭಗೊಂಡಿತು.

ಬೆಳಿಗ್ಗೆ ದೇವಾಲಯದ ಪ್ರಧಾನ ಅರ್ಚಕರು ದೇವರಿಗೆ ಮತ್ತು ದೈವಗಳ ಪೂಜಾರಿಗಳು ದೈವಗಳಿಗೆ ಗೊನೆ ಕಡಿಯಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ನಿಕಟಪೂರ್ವಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಚ್ಚುತ್ತ ಮಾಸ್ಟರ್ ತೇರ್ಥಮಾಜಲು ಸೇರಿದಂತೆ ದೇವಾಲಯದ ವಿವಿಧ ಸಮಿತಿಗಳ ಸದಸ್ಯರು, ವ್ಯವಸ್ಥಾಪನ ಸಮಿತಿ ಸದಸ್ಯರು, ಹಾಗೂ ಭಕ್ತರು ಉಪಸ್ಥಿತರಿದ್ದರು.