ಪೊಲೀಸರ ಆಗಮನ, ಪರಿಶೀಲನೆ ವೇಳೆ ಚೀಲದಲ್ಲಿತ್ತು ಸತ್ತ ನಾಯಿಯ ಕಳೇಬರ
ಗಾಂಧಿನಗರ ಶಾಲೆಯ ಬಳಿ ಚರಂಡಿಯಲ್ಲಿ ಏ. 3 ರಂದು ರಕ್ತಸಿಕ್ತವಾದ ಗೋಣಿ ಚೀಲವೊಂದು ಪತ್ತೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತಕ್ಷಣವೇ
ಪರಿಶೀಲನೆ ನಡೆಸಿದ್ದು, ಗೋಣಿ ಚೀಲದಲ್ಲಿ ಸತ್ತ ನಾಯಿಯ ಕಳೇ ಬರ ಕಂಡು ಬಂದಿದೆ. ಯಾರೋ ನಾಯಿಯನ್ನು ಕೊಂದು ಚೀಲದಲ್ಲಿ ತುಂಬಿ ಚರಂಡಿಗೆ ಬಿಸಾಡಿ ಹೋಗಿರುವುದಾಗಿ,ವಿಷಯ ತಿಳಿದ ಸ್ಥಳೀಯರು ನಿಟ್ಟುಸಿರು ಬಿಟ್ಟ,ಕೆಲವರು
ಈ ಕೃತ್ತ್ಯ ಮಾಡಿದವರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ ಘಟನೆಯೂ ನಡೆಯಿತು.