ವಾಹನ ಜಖಂ, ಅಪಾಯದಿಂದ ಪಾರು
ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಪಿಕಪ್ ವಾಹನವೊಂದು ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಯವೊಂದರ ಒಳಗೆ ನುಗ್ಗಿದ ಘಟನೆ ಇದೀಗ ವರದಿಯಾಗಿದೆ.



ಸುಳ್ಯ ಭಾಗದಿಂದ ಕುರಿಂಜಿಗುಡ್ಡೆ ಕಡೆ ಹೋಗುತ್ತಿದ್ದ ವಾಹನ ಬ್ರೇಕ್ ಫೈಲ್ ಆದಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ . ಘಟನೆಯಿಂದ ವಾಹನ ಅಲ್ಪ ಜಖಂಗೊಂಡಿದ್ದು ಅಲ್ಲದೆ ಅಂಗಡಿಯ ಪರಿಸರದಲ್ಲಿ ಇಟ್ಟಿದ್ದ ಇನ್ನಿತರ ಪರಿಕರಗಳು ಹಾನಿಯಾಗಿದೆ. ಪ್ರಯಾಣಿಕರು ಮತ್ತು ಅಂಗಡಿಯವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.