ಮಡಪ್ಪಾಡಿಯಿಂದ ಕಾಶಿ ನಡುಬೆಟ್ಟು ಮನೆಗಳಿಗೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ತೀರ ಹದಗೆಟ್ಟಿದ್ದು, ಆ ರಸ್ತೆಯ ಫಲಾನುಭವಿಗಳ ಬೇಡಿಕೆಗೆ ಸ್ಪಂದಿಸಿ ಶಾಸಕರಿಗೆ ಮಡಪ್ಪಾಡಿ ಗ್ರಾಮ ಸಮಿತಿ ಕಡೆಯಿಂದ ಬಿಜೆಪಿ ಜಿಲ್ಲಾಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ನೇತೃತ್ವದಲ್ಲಿ ಮನವಿ ಸಲ್ಲಿಸಿ ಶಾಸಕರ ವಿಶೇಷ ಅನುದಾನವನ್ನು ತರಿಸಿಕೊಂಡು ಮಡಪ್ಪಾಡಿ – ಕಾಶಿ- ನಡುಬೆಟ್ಟು ರಸ್ತೆಯಲ್ಲಿ ಫಲಾನುಭವಿಗಳ ಬಹು ಬೇಡಿಕೆಯ ಮತ್ತು ಕಡಿದಾದ (ಚಡಾವು) ದಿಣ್ಣೆಯನ್ನೂ ತಗ್ಗಿಸುವ ಕಾರ್ಯಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಡಪ್ಪಾಡಿ ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು, ಉಪಾಧ್ಯಕ್ಷರಾದ
ಸಚಿನ್ ಕುಮಾರ್ ಬಳ್ಳಡ್ಕ, ಸದಸ್ಯರಾದ ಕರುಣಾಕರ ಪಾರೆಪ್ಪಾಡಿ ಹಾಗೂ ಶಕ್ತಿ ಕೇಂದ್ರ ಪ್ರಮುಖರಾದ ಚಂದ್ರಶೇಖರ ಗೋಲ್ಯಾಡಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳಾದ ಧನ್ಯಕುಮಾರ್ ದೇರುಮಜಲು ಹಾಗೂ ರಂಜಿತ್ ಬೊಮ್ಮೆಟ್ಟಿ ಬೂತ್ ಕಾರ್ಯದರ್ಶಿ ಕಿರಣ್ ಶೀರಡ್ಕ, ಬಿಜೆಪಿ ಸಕ್ರಿಯ ಕಾರ್ಯಕರ್ತರದ ಹೇಮಾಕುಮಾರ್ ಹಾಡಿಕಲ್ಲು ಮತ್ತು ವೇಣು ಗೋಪಾಲ್ ಶೀರಾಡ್ಕ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಗುತ್ತಿಗೆದಾರರದ ಶ್ರೇಯಸ್ ಮುತ್ಲಾಜೆ ಉಪಸ್ಥಿತರಿದ್ದರು.
ಗುದ್ದಲಿ ಪೂಜೆಯಯನ್ನೂ ನಡುಬೆಟ್ಟು ಕುಟುಂಬದ ಹಿರಿಯರಾದ ಹೂವಪ್ಪ ನಡುಬೆಟ್ಟು, ಕಮಲಾಕ್ಷ ನಡುಬೆಟ್ಟು ಹಾಗೂ ಬಾಲಕೃಷ್ಣ ನಡುಬೆಟ್ಟು ನೆರವೇರಿಸಿದರು.