2024-25 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ಪಡುವ ರಾಷ್ಟ್ರಮಟ್ಟದ ಫುಟ್‍ಬಾಲ್ ಪಂದ್ಯಾಟಕ್ಕೆ ಕು. ರಕ್ಷಾಅತ್ಯಾಡಿಯವರು ಆಯ್ಕೆಯಾಗಿರುತ್ತಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ಬೆಸ್ಟ್ ಡಿಫೆಂಡರ್ ಪದಕ ಪಡೆದುಕೊಳ್ಳುವ ಮೂಲಕ ಎ.15 ರಿಂದ ಮಣಿಪುರ ಇಂಫಾಲ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಈಕೆ ಅಜ್ಜಾವರ ಗ್ರಾಮದ ಅತ್ಯಾಡಿ ಭರತ್ ಕುಮಾರ್ ಮತ್ತು ಉದಯ ಕುಮಾರಿ ದಂಪತಿಯ ಪುತ್ರಿ. ಮಂಗಳೂರಿನ ಸ್ಸೈಂಟ್ ಅಲೋಶಿಯಸ್ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿಯಾಗಿರುತ್ತಾರೆ.