ಸುಳ್ಯ ದ ಕಾರ್ ಸ್ಟ್ರೀಟ್ ನ
ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದ 2ನೇ ಮಹಡಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ
ದೀನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ ಇದರ ವತಿಯಿಂದ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಣೆ ಮತ್ತು ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಎ.16 ರಂದು ನಡೆಯಲಿದೆ.
ದಿನ ದಯಾಳ್ ಸಹಕಾರ ಸಂಘ ನಿಯಮಿತ ಸುಳ್ಯ 2024 ಡಿ.7 ರಂದು ಉದ್ಘಾಟನೆಗೊಂಡಿದ್ದು, ಇದೀಗ ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ಒನ್ ಜನ ಸಂಪರ್ಕ ಕೇಂದ್ರ ಮಂಜೂರಾತಿಗೊಂಡಿರುತ್ತದೆ. ಸಹಕಾರ ಸಂಘದ ಕಛೇರಿಯ ಪಕ್ಕದಲ್ಲಿ ಜನ ಸಂಪರ್ಕ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಕೊಡಲ್ಪಡುವ ಯೋಜನೆಗಳ ಸೌಲಭ್ಯವನ್ನು ಜನ ಸಾಮಾನ್ಯರಿಗೆ ಅತ್ಯಂತ ಸುಲಭದಲ್ಲಿ ತಲುಪಿಸುವ ಉದ್ದೇಶದಿಂದ ಎ.16 ರಂದು
ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ
ಪಾಲುಬಂಡವಾಳ ಪ್ರಮಾಣ ಪತ್ರ ವಿತರಣೆ ಮತ್ತು ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಉದ್ಘಾಟನೆ ನಡೆಯಲಿದೆ.
ಸುಳ್ಯ ದ
ತಹಶೀಲ್ದಾರರಾದ ಕು.ಮಂಜುಳಾ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮ ದ ಅಧ್ಯಕ್ಷತೆ
ದೀನ ದಯಾಳ್ ಸಹಕಾರ ಸಂಘ ಅಧ್ಯಕ್ಷರಾದ ಎಸ್. ಅಂಗಾರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ , ಸಿ.ಎ. ಬ್ಯಾಂಕ್
ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ ಉಪಸ್ಥಿತರಿರಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ಮಾಜಿ ಸಚಿವ ಮತ್ತು ಮಾಜಿ ಶಾಸಕ ,
ದೀನ ದಯಾಳ್ ಸಹಕಾರ ಸಂಘ ಅಧ್ಯಕ್ಷರಾದ ಎಸ್. ಅಂಗಾರ ಸುದ್ದಿಗೆ ತಿಳಿಸಿದ್ದಾರೆ.