ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಎ.11 ರಿಂದ ವಾಲಿಬಾಲ್ ತರಬೇತಿ ಶಿಬಿರ

0
ತಾಲೂಕು ವಾಲಿಬಾಲ್ ಅಸೋಸಿಯೇಷನ್ ಸುಳ್ಯ ಇದರ ವತಿಯಿಂದ  ಸುಳ್ಯ ತಾಲೂಕಿನ 18 ವರ್ಷ ವಯೋಮಾನದ ಒಳಗಿನ ಮತ್ತು 13 ವರ್ಷ ಮೇಲ್ಪಟ್ಟ ಹುಡುಗ -  ಹುಡುಗಿಯರಿಗೆ ವಾಲಿಬಾಲ್ ತರಬೇತಿ ಶಿಬಿರವನ್ನು ಎಪ್ರಿಲ್ 11 ರಿಂದ ಎಂಟು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. 

ಈ ಶಿಬಿರದ ಮುಖ್ಯ ತರಬೇತಿದಾರರಾಗಿ ರಾಜೇಶ್ ಪತ್ತಾರ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರು ಪಾಲ್ಗೊಳ್ಳಲಿದ್ದಾರೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಎಪ್ರಿಲ್ 11 – 2025 ರ ಶುಕ್ರವಾರದಂದು ಸಂಜೆ 3.00 ಗಂಟೆಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿಯ ಮೈದಾನದಲ್ಲಿ ಹಾಜರಿರಬೇಕು. 1000 ರೂಪಾಯಿಗಳ ತರಬೇತಿ ಶುಲ್ಕವನ್ನು ನೀಡಿ ಹೆಸರು ನೋಂದಾಯಿಸಿ
ಕೊಳ್ಳಬೇಕು. ಜೊತೆಗೆ ಆಧಾರ್ ಕಾರ್ಡ್ ಪ್ರತಿಯನ್ನು ತೆಗೆದುಕೊಂಡು ಬರಬೇಕು. ತರಬೇತಿಯ ಕೊನೆಯಲ್ಲಿ ಕ್ರೀಡಾ ಉಡುಗೆಯನ್ನು ನೀಡಲಾಗುವುದು.
ಶಿಬಿರವು ಮುಂಜಾನೆ ಮತ್ತು ಸಾಯಂಕಾಲ ಏರಡು ಅವಧಿಗಳಲ್ಲಿ ನಡೆಯಲಿದೆ. ವಸತಿ ವ್ಯವಸ್ಥೆ ಇರುವುದಿಲ್ಲ . ಆಟಗಾರರೇ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ದೊಡ್ಡಣ್ಣ ಬರೆಮೇಲು, ಜಯಪ್ರಕಾಶ್ ಕುಡೆಕಲ್ಲು, ಇರ್ಫಾನ್ ಜನತಾ, ಸುದರ್ಶನ್ ಸುಳ್ಯ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದೊಡ್ಡಣ್ಣ ಬರೆಮೇಲು ತಿಳಿಸಿದ್ದಾರೆ.