ಗೃಹೋಪಯೋಗಿ
ಇಲೆಕ್ಟ್ರಿಕಲ್ ಸಾಮಾಗ್ರಿಗಳ ಮಳಿಗೆ ಸ್ಕಂದ ಇಲೆಕ್ಟ್ರಿಕಲ್ ಎಂಟರ್ಪ್ರೈಸಸ್ ಎ. 12ರಂದು ಬೆಳ್ಳಾರೆಯ ಹರಿಯಪ್ಪ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಬೆಂಗಳೂರಿನ ಎನ್.ಎ.ಎಲ್ ನಿವೃತ್ತ ಸೀನಿಯರ್ ಸೈಂಟಿಸ್ಟ್ ಬಿ.ಎನ್. ನಾಯ್ಕ್ ಮತ್ತು ನಿವೃತ್ತ ಪ್ರಾಂಶುಪಾಲರಾದ ಸುರೇಶ್ ಸಂಸ್ಥೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಮಾಲಕರಾದ ಶ್ರೀಮತಿ ಪ್ರತಿಭಾ ಮನೋಹರ ಅತಿಥಿಗಳನ್ನು ಸ್ವಾಗತಿಸಿದರು.

ನೂತನ ಸಂಸ್ಥೆಯಲ್ಲಿ
ವಿವಿಧ ಕಂಪನಿಗಳ ಇಲೆಕ್ಟ್ರಿಕಲ್ ಸಾಮಾಗ್ರಿಗಳ
ಅಧಿಕೃತ ಮಾರಾಟ ಮತ್ತು ದಾಸ್ತಾನು ಮಳಿಗೆ ಇದಾಗಿದ್ದು, ಕೇಬಲ್ ಮತ್ತು ವಯರ್ಸ್, LED ಲೈಟ್ಸ್, CCTV ಕ್ಯಾಮರ, ಪಿವಿಸಿ ಪೈಪುಗಳು, ಇನ್ವರ್ಟರ್ & ಬ್ಯಾಟರಿಗಳು, ಸೋಲಾರ್, ಸ್ವಿಚ್‌ಗಳು ಮತ್ತು ಗೃಹೋಪಯೋಗಿ ಇಲೆಕ್ಟಿಕ್ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇಲೆಕ್ಟಿಕಲ್ ಕಾಂಟ್ರ್ಯಾಕ್ಟ್ ಕೆಲಸಗಳು, CCTV ಅಳವಡಿಕೆ ಮತ್ತು ನಿರ್ವಹಣೆಗಳು,
UPS/Invertor ಅಳವಡಿಕೆ ಮತ್ತು ನಿರ್ವಹಣೆಗಳು,
ಪ್ಲಂಬಿಂಗ್ ಕಾಂಟ್ರ್ಯಾಕ್ಟ್ ಕೆಲಸಗಳು, ವಿನ್ಯಾಸ ಮತ್ತು ಸಲಹಾ ಸೇವೆಗಳು, Govt. Body ಅನುಮೋದನೆಗಳು,
ಫಯರ್ ಅಲಾರ್ಮ್ ಮತ್ತು ಫಯರ್ ಫೈಟಿಂಗ್ ಕೆಲಸಗಳು, ಇಂಟೀರಿಯರ್ ಕೆಲಸಗಳನ್ನು ಮಾಡಿ ಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.