ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಸೊಸೈಟಿಯ ಚುನಾವಣಾ ಫಲಿತಾಂಶ ಘೋಷಣೆಗೆ ಕೋರ್ಟ್ ಆದೇಶ

0

ಏಳು ದಿನದೊಳಗೆ ಫಲಿತಾಂಶ ಘೋಷಣೆ ಮಾಡಲು ಸೂಚನೆ

ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಸೊಸೈಟಿಯ ಚುನಾವಣಾ ಫಲಿತಾಂಶ ಘೋಷಿಸಲು ಕೋರ್ಟ್ ತೀರ್ಪು ನೀಡಿರುವ ಪ್ರತಿ ಡಿ.ಆರ್. ಕೈ ಸೇರಿರುವುದಾಗಿ ವರದಿಯಾಗಿದೆ.

ಜ.19 ರಂದು ಕೊಲ್ಲಮೊಗ್ರು ಹರಿಹರ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಯಾಗಿರಲಿಲ್ಲ.
ಅಧಿಕೃತವಾಗಿ ಫಲಿತಾಂಶ ಘೋಷಣೆ ಆಗದಿದ್ದರೂ ಮತಗಳ ಹಂಚೆಕೆ ಆಧಾರದಲ್ಲಿ ಸಹಕಾರ ಭಾರತಿ 12 ಸ್ಥಾನದಲ್ಲೂ ಮುನ್ನಡೆ ಪಡೆದು ಪೂರ್ಣ ಪ್ರಮಾಣದಲ್ಲಿ ವಿಜಯ ಗಳಿಸಿತ್ತು. ಬಳಿಕ ಸಹಕಾರ ಭಾರತಿ ಫಲಿತಾಂಶ ಘೋಷಿಸಲು ಹೈಕೋರ್ಟ್ ಮೊರೆ ಹೋಗಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಲಯ ಫಲಿತಾಂಶ ಘೋಷಿಸುವಂತೆ ತೀರ್ಪು ನೀಡಿದ್ದು , ಅದರ ಪ್ರತಿ ಅಧಿಕಾರಿಗಳ ಕೈಸೇರಿರಲಿಲ್ಲ. ಇದೀಗ ಕೋರ್ಟ್ ಆದೇಶ ಡಿ.ಆರ್.ರವರ ಕೈಸೇರಿದ್ದು ಏಳು ದಿನದೊಳಗೆ ಫಲಿತಾಂಶ ಘೋಷಿಸಲು ತೀರ್ಪಿನಲ್ಲಿ ತಿಳಿಸಲಾಗಿದೆಯೆನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಶನಿವಾರದೊಳಗೆ ಫಲಿತಾಂಶ ಘೋಷಣೆ ಯಾಗುವ ಸಾಧ್ಯತೆಯಿದೆ.