ಜಾಲಿ ಫ್ರೆಂಡ್ಸ್ ಶರವೂರು- ವಿನ್ನರ್, 4ಜಿ ದುಗಲಡ್ಕ- ರನ್ನರ್
ಶ್ರೀಸ ಆಲೆಟ್ಟಿ ಇದರ ಆಶ್ರಯದಲ್ಲಿ ದಿ.ಅಶೋಕ್ ಆಲೆಟ್ಟಿ ಸ್ಮರಣಾರ್ಥವಾಗಿ ಶ್ರೀಸ ಟ್ರೋಫಿ 2025 ರ ವಿಧಾನ ಸಭಾ ಕ್ಷೇತ್ರದ 12 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು
ಎ.5 ಮತ್ತು 6 ರಂದು ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಿತು.

ಎ.5 ರಂದು ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಅಶೋಕ ಪ್ರಭು ರವರು ದೀಪ ಪ್ರಜ್ವಲಿಸಿ ಪಂದ್ಯಾಟವನ್ನು ಉದ್ಘಾಟಿಸಿದರು.
ಲವಿನ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ
ಹಿರಿಯ ಆಟಗಾರ ಪುರುಷೋತ್ತಮ ಗೌಡ ಕೋಲ್ಚಾರು, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
ಮರುದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ನ್ಯಾಯವಾದಿ ಯಂ.ವೆಂಕಪ್ಪ ಗೌಡ, ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ, ಟಿ.ಸಿ.ಎಸ್ ಮ್ಯಾನೇಜರ್ ಷಣ್ಮುಗಂ ಬೆಂಗಳೂರು, ಶ್ರೀಆಜಿ ಸ್ಟೋರ್ಸ್ ಮಾಲಕ ಪ್ರಕಾಶ್,
ಲವಿನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಅಪ್ಪಯ್ಯ ಮಣಿಯಾಣಿ ಆಲೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿವನಜಾಕ್ಷಿಆಲೆಟ್ಟಿ,ಯುವ ಉದ್ಯಮಿ ಶ್ರೀನಾಥ್ ಆಲೆಟ್ಟಿ, ಹಿರಿಯ ಆಟಗಾರ ಯೋಗೀಶರಾಮ ಅಡ್ಪಂಗಾಯ ರವರನ್ನು ಸನ್ಮಾನಿಸಲಾಯಿತು.

ಪಂದ್ಯಾಟದಲ್ಲಿ ವಿನ್ನರ್ ಆಗಿ ಜಾಲಿ ಫ್ರೆಂಡ್ಸ್ ಶರವೂರು, ರನ್ನರ್ ಆಗಿ 4ಜಿ ದುಗಲಡ್ಕ ವಿಜೇತರಾದರು. ವಿಜೇತ ತಂಡಗಳಿಗೆ ಪ್ರಥಮ ರೂ.50,050/- ಮತ್ತು ಟ್ರೋಫಿ, ದ್ವಿತೀಯ
ರೂ.30,030/- ಮತ್ತು ಟ್ರೋಫಿ ನೀಡಲಾಯಿತು.
ವೈಯಕ್ತಿಕಬಹುಮಾನಗಳನ್ನುನೀಡಿಪುರಸ್ಕರಿಸಲಾಯಿತು. ಸುಳ್ಯ ವಿಧಾನ ಸಭಾ ಕ್ಷೇತ್ರದ 12 ತಂಡಗಳ ಮಧ್ಯೆ ಎರಡು ದಿನಗಳ ಕಾಲ ಪಂದ್ಯಾಟವು ಅತ್ಯಂತ ಶಿಸ್ತು ಬದ್ಧವಾಗಿ ಕೊನೆಗೊಂಡಿತು.
ಶ್ರೀಸ ಆಲೆಟ್ಟಿ ತಂಡದ ಸದಸ್ಯರು ನಿರಂತರವಾಗಿ ಸ್ವಯಂ ಸೇವಕರಾಗಿ ಸಹಕರಿಸಿದರು.
ಎರಡು ದಿನ ಮಧ್ಯಾಹ್ನ ಆಟಗಾರರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.