Home Uncategorized ಎಲಿಮಲೆಯ ಮಿತ್ರ ಬಳಗದ ವತಿಯಿಂದ ಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ಹಗ್ಗಜಗ್ಗಾಟ

ಎಲಿಮಲೆಯ ಮಿತ್ರ ಬಳಗದ ವತಿಯಿಂದ ಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ಹಗ್ಗಜಗ್ಗಾಟ

0

ನಿವೃತ್ತ ಗೊಳ್ಳಲಿರುವ ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಮತ್ತು ಹಿರಿಯ ಕ್ರೀಡಾ ಪಟು ಲಕ್ಷ್ಮಣ ಬೊಳ್ಳಾಜೆಯವರಿಗೆ ಸನ್ಮಾನ

ಎಲಿಮಲೆಯ ಮಿತ್ರ ಬಳಗದ ವತಿಯಿಂದ ಪ್ರಥಮ ಬಾರಿಗೆ 520 ಕೆ.ಜಿ. ವಿಭಾಗದ ಪುರುಷರ ಮತ್ತು 505 ಕೆ.ಜಿ. ವಿಭಾಗದ ಮಹಿಳೆಯರ 8 ಜನರ ಲೆವೆಲ್ ಮಾದರಿಯ ಹೊನಲು ಬೆಳಕಿನ ಹಗ್ಗ ಜಗ್ಗಾಟ ಮಿತ್ರ ಬಳಗ ಟ್ರೋಫಿ 2025 ಎ.5ರಂದು ಎಲಿಮಲೆಯ ವಠಾರದಲ್ಲಿ ನಡೆಯಿತು.

ಸಂಜೆ ಪಂದ್ಯಾಟದ ಉದ್ಘಾಾಟನೆ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರ ಬಳಗದ ಅಧ್ಯಕ್ಷ ಕುಲದೀಪ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಮಟ್ಟದ ಹಿರಿಯ ಕ್ರೀಡಾಪಟು ಲಕ್ಷ್ಮಣ ಬೊಳ್ಳಾಾಜೆ ನೆರವೇರಿಸಿದರು. ಪಂದ್ಯಾಟದ ಉದ್ಘಾಟನೆಯನ್ನು ಎಲಿಮಲೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ನಿರ್ದೇಶಕ ನವೀನ್ ಬಾಳುಗೋಡು, ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ಪಾರೆಪ್ಪಾಡಿ ಹಾಗೂ ನಾಗೇಶ್ ತಳೂರು, ಹೇಮನಾಥ ಕೋಡ್ತುಗುಳಿ, ಮಿತ್ರ ಬಳಗದ ಕಾರ್ಯದರ್ಶಿ ಪ್ರಶಾಂತ್ ಅಂಬೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತಗೊಳ್ಳಲಿರುವ ಎಲಿಮಲೆ ಸರಕಾರಿ ಪ್ರೌೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಮತ್ತು ರಾಷ್ಟ್ರ ಮಟ್ಟದ ಹಿರಿಯ ಕ್ರೀಡಾಪಟು ಲಕ್ಷ್ಮಣ ಬೊಳ್ಳಾಜೆಯವರನ್ನು ಮಿತ್ರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ತಾರನಾಥ ಅಡಿಗೈ ಸ್ವಾಗತಿಸಿ, ಹರೀಶ್ಚಂದ್ರ ಚಳ್ಳ ವಂದಿಸಿದರು. ಉದಯ ಕುಮಾರ್ ಚಳ್ಳ ಕಾರ್ಯಕ್ರಮ ನಿರೂಪಿಸಿದರು.

ಹಗ್ಗ ಜಗ್ಗಾಟ ಫಲಿತಾಂಶ :
ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಯುವ ಬ್ರದರ್ಸ್ ದುಗ್ಗಲಡ್ಕ ಎ, ದ್ವಿತೀಯ ಶಿವಶಕ್ತಿ ಶಿವಾಜಿನಗರ, ತೃತೀಯ ಸ್ಥಾನ ವನ್ನು ನ್ಯೂ ಫ್ರೆಂಡ್ಸ್ ಬೊಮ್ಮಾರ್ ಬಿ., ಚತುರ್ಥ ಯುವ ಬ್ರದರ್ಸ್ ದುಗ್ಗಲಡ್ಕ ಬಿ. ಪಡೆದುಕೊಂಡರು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಜನನಿ ಫ್ರೆಂ ಡ್ಸ್ ನಿಟ್ಟೆ ಬಿ, ದ್ವಿತೀಯ ಸ್ಥಾನವನ್ನು ಸಿಂಗಿಂಗ್ ಫ್ರೆಂಡ್ಸ್ ಕಾಸರಗೋಡು, ತೃತೀಯ ಸ್ಥಾನವನ್ನು ಡಾ.ಜಿ.ಶಂಕರ್ ವುಮೆನ್ಸ್ ಫಸ್ಟ್ ಗ್ರೇಡ್ ಕಾಲೇಜು ಉಡುಪಿ, ಚತುರ್ಥ ಬಹುಮಾನವನ್ನು ಜನನಿ ಫ್ರೆಂಡ್ಸ್ ನಿಟ್ಟೆ ‘ಎ’ ಪಡೆದುಕೊಂಡರು.

ಹೈಲೈಟ್ಸ್ :

  • ಸಂಘಟಕರ ನಿರೀಕ್ಷೆಗಿಂತಲೂ ಹೆಚ್ಚು ಜನ ಬಂದು ಪಂದ್ಯಾಟ ವೀಕ್ಷಿಸಿದರು.
  • ಮಿತ್ರ ಬಳಗದ ಸದಸ್ಯರು ಸಮವಸ್ತ್ರ ಧರಿಸಿ ಪಂದ್ಯಾಟದ ಯಶಸ್ಸಿಿಗೆ ದುಡಿದರು.
  • ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

NO COMMENTS

error: Content is protected !!
Breaking