Home ಚಿತ್ರವರದಿ ಸಂವಿಧಾನ ಬದಲಾವಣೆ ಕುರಿತು ಡಿ.ಕೆ.ಶಿ. ಹೇಳಿಕೆ ಖಂಡನೀಯ : ಸುಳ್ಯ ಬಿಜೆಪಿ ಪ್ರತಿಭಟನೆ

ಸಂವಿಧಾನ ಬದಲಾವಣೆ ಕುರಿತು ಡಿ.ಕೆ.ಶಿ. ಹೇಳಿಕೆ ಖಂಡನೀಯ : ಸುಳ್ಯ ಬಿಜೆಪಿ ಪ್ರತಿಭಟನೆ

0

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದು, ಖಂಡನೀಯ ಅವರು ತಕ್ಷಣ ತಮ್ಮ ಹೇಳಿಕೆ ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.

ಮಾ.25ರಂದು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಡಿ.ಕೆ.ಶಿವಕುಮಾರ್ ರ ಹೇಳಿಕೆ ವಿರುದ್ಧವಾಗಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹಿರಿಯ ಮುಖಂಡ ಪಿ.ಕೆ.ಉಮೇಶರು ಮಾತನಾಡಿ, ಸಂವಿಧಾನದಡಿಯಲ್ಲಿ ಪ್ರಮಾಣ ಸ್ವೀಕಾರ ಮಾಡಿ ಅಧಿಕಾರಕ್ಕೆ ಬಂದವರು ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯೆ ಶೀಲಾ ಕುರುಂಜಿ,
ಪಿ.ಕೆ.ಉಮೇಶ್, ಹೇಮಂತ್ ಮಠ, ಕೃಷ್ಣಯ್ಯ ಮೂಲೆತೋಟ, ಜಗನ್ನಾಥ ಜಯನಗರ, ಸೋಮನಾಥ ಪೂಜಾರಿ, ಭಾರತಿ ಉಳುವಾರು, ನಾರಾಯಣ ಎಸ್.ಎಂ. ಶಾಂತಿನಗರ, ಶ್ರೀಕಾಂತ್ ಮಾವಿನಕಟ್ಟೆ, ಮಹೇಶ್ ಮೇರ್ಕಜೆ,
ಶಿವಪ್ರಸಾದ್ ನಡುತೋಟ, ನವೀನ್ ಕುದ್ಪಾಜೆ, ಕೇಶವ ಮಾಸ್ಟರ್ ಹೊಸಗದ್ದೆ, ಅಶೋಕ್ ಅಡ್ಕಾರು, ಪ್ರದೀಪ್ ಕಣಕ್ಕೂರು, ಅವಿನಾಶ್ ಕುರುಂಜಿ, ಶೀನಪ್ಪ ಬಯಂಬು, ಶ್ರೀನಿವಾಸ ಹಳೆಗೇಟು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು ಮೊದಲಾದವರಿದ್ದರು.

ಬಿಜೆಪಿ ನಗರಾಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರ್ವಹಿಸಿದರು.

NO COMMENTS

error: Content is protected !!
Breaking