ಮಂಗಳೂರು:ವಿಜಯ ಕರ್ನಾಟಕ ದಿನ ಪತ್ರಿಕೆ ಹಾಗೂ ನೀರುಮಾರ್ಗ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸಲು 7 ನೇ ವರ್ಷದ ವಿಕ ಸೂಪರ್‌ಸ್ಟಾರ್ ರೈತ ಪುರಸ್ಕಾರ – 2024-25 ಸುಳ್ಯದ ಸುಳ್ಯದ ಇಂಡಿಯನ್ ಟೈಲ್ಸ್ ಮಾಲಕ ಉದ್ಯಮಿ ಪ್ರಗತಿಪರ ಹೈನುಗಾರ ಆಶ್ರಪ್ ಇಂಡಿಯನ್ ಅವರಿಗೆ ನೀಡಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೀರುಮಾರ್ಗ ಸೇವಾ ಸಹಕಾರಿ ಸಂಘದ ಅಮೃತಸೌಧ ಸಭಾಭವನ ದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಮುಲೈ ಮಹಿಲನ್ ಪ್ರಧಾನ ಮಾಡಿದರು.ಮಾಜಿ ಮೇಯರ್ ಭಾಸ್ಕರ್ .ಕೆ ಉದ್ಘಾಟಿಸಿದರು. ಸಹಕಾರಿ ಸಂಘ ಅಧ್ಯಕ್ಷೆ ಸೆಲಿನ್ ಡಿಮೆಲ್ಲೋ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್ ಕೆ., ಎಸಿಪಿ ಧನ್ಯಾ ನಾಯಕ್, ತಿರುವೈಲುಗುತ್ತು ಕಂಬಳ ಸಮಿತಿ ಸ್ಥಾಪಕ ನವೀನ್ ಆಳ್ವ ತಿರುವೈಲು ಗುತ್ತು, ಜಿಪಂ ನಾಮ ನಿರ್ದೇಶಿತ ಸದಸ್ಯ ಮೆಲ್ವಿನ್ ಡಿಸೋಜ, ., ಪ್ರಗತಿಪರ ಕೃಷಿಕ ಪದ್ಮನಾಭ ಕೋಟ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸುಜಾತ, ನೀರು ಮಾರ್ಗ ಸೇವಾ ಸಹಕಾರಿ ಸಂಘದ ಸಿಇಒ ಬೆನೆಡಿಕ್ಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.