ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧಿಕಾರಿಗಳು ಹಾಗೂ ನೌಕರರಿಂದ ಕುಮಾರಧಾರ ಸ್ವಚ್ಚತೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ಎಸೆದ ತ್ಯಾಜ್ಯ ವಸ್ತುಗಳನ್ನು ಮಾ.26 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧಿಕಾರಿಗಳು ಹಾಗೂ ನೌಕರರು ತ್ಯಾಜ್ಯವನ್ನು ನೀರಿನಿಂದ ಮೇಲಕೆತ್ತಿ
ಸ್ವಚ್ಚಗೊಳಿಸಿದರು.

ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಹಾಗೂ ಅಧಿಕಾರಿ ವೃಂದದವರು ಹಾಗೂ ಸುಮಾರು 150ಕ್ಕೂ ಮಿಕ್ಕಿ ನೌಕರರು ಸ್ವತಹ ಈ ಸ್ಥಾನಘಟ್ಟದ ಪ್ರದೇಶದಲ್ಲಿ ನೀರಿಗಿಳಿದು ಬಟ್ಟೆ ಬರೆಗಳನ್ನು ಸ್ವತಃ ಮೇಲಕ್ಕೆ ತಂದರು. ರಾಶಿ ರಾಶಿಯಾಗಿ ಇದ್ದಂತ ಬಟ್ಟೆ ಬರೆಗಳನ್ನು ಗ್ರಾಮ ಸುಬ್ರಹ್ಮಣ್ಯ ಪಂಚಾಯಿತ್ ನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಲಾಯಿತು.