ಸುಳ್ಯ ನಗರ ಪಂಚಾಯತ್ ಸದಸ್ಯ ಶರಿಫ್ ಕಂಠಿ ಯವರ ಮೇಲಿನ ಮಹಿಳೆಗೆ ಹಲ್ಲೆ ಮಾಡಿರುವ ಆರೋಪ ದ ಪ್ರಕಣಕ್ಕೆ ಸಂಬಂಧಿಸಿ ಪುತ್ತೂರು ಐದನೇ ಹೆಚ್ಚುವರಿ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಇಂದು ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಪುತ್ತೂರು ಜಿಲ್ಲಾ 5ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಯವರು ಆದೇಶ ನೀಡಿದ್ದು, ಸರಕಾರಿ ಅಭಿಯೋಜಕರ ಆಕ್ಷೇಪಣೆಗಾಗಿ ದಿನಾಂಕ 3/4/2025 ಕ್ಕೆ ಮುಂದೂಡಿದ್ದಾರೆ.



ಅರೋಪಿ ಪರ ಸುಳ್ಯದ ಹಿರಿಯ ನ್ಯಾಯವಾದಿ ಯಂ ವೆಂಕಪ್ಪ ಗೌಡ ,ಚಂಪಾ ಗೌಡ ,ರಾಜೇಶ ಬಿ ಜಿ ಹಾಗೂ ಶಾಮಪ್ರಸಾದ್ ನಿಡ್ಯಮಲೆ ವಾದಿಸಿರುತ್ತಾರೆ.